ಕರಾವಳಿ

ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದವಿಲ್ಲ, ಕೋಮು ಹಿಂಸಾಚಾರ ಕಡಿವಾಣಕ್ಕೆ ಕ್ರಮ: ಉಡುಪಿಯ ನೂತ‌ನ‌ ಎಸ್ಪಿ ಡಾ.ಕೆ.‌ ಅರುಣ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡ್ರಗ್ಸ್ ಹಾಗೂ ಮಾದಕ ದೃವ್ಯ ಸಹಿತ ಕಾನೂನು ಬಾಹಿರವಾಗಿ ನಡೆಯುವ ಪಬ್ ಚಟುವಟಿಕೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಜನಸ್ನೇಹಿ‌ ಪೊಲೀಸ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕ ಡಾ. ಕೆ.‌ ಅರುಣ್ ಹೇಳಿದರು.

ಗುರುವಾರ ನಿರ್ಗಮಿತ ಎಸ್ಪಿ ಅಕ್ಷಯ್ ಹಾಕೆ ಎಂ. ಅವರಿಂದ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋಮು ಪ್ರಚೋದಿನೆಯ ಹಿಂಸಾಚಾರ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಅನೈತಿಕ ಪೊಲೀಸ್‌ ಗಿರಿಗೆ ಅವಕಾಶವೇ ನೀಡಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಲ್ಲಬೇಕು. ಕಾನೂನು ವಿರೋಧಿ ಚಟುವಟಿಕೆ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

2014 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಕೆ. ಅರುಣ್ ಅವರು ಪಾಂಡಿಚೇರಿ ಇನ್ಸಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ‌. ಈ ಹಿಂದೆ ಚಿತ್ರದುರ್ಗ, ದಾವಣಗೆರೆ, ವಿಜಯಪುರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

 

 

 

Comments are closed.