ಕರಾವಳಿ

ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ಅಸ್ವಸ್ಥ: ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

Pinterest LinkedIn Tumblr

ಬೆಂಗಳೂರು: ಬಿಜೆಪಿ‌ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 5 ಕೋಟಿ ರೂ. ಪಡೆದು ವಂಚಿಸಿದ ಪ್ರಕರಣದ ಆರೋಪಿ ಚೈತ್ರಾ‌ ಕುಂದಾಪುರ ಅಸ್ವಸ್ಥಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೋಟೆಲ್‌ ಉದ್ಯಮಿ‌ ಗೋವಿಂದ ಬಾಬು ಪೂಜಾರಿ‌ ನೀಡಿದ್ದ ದೂರು ಆಧರಿಸಿ‌ ಚೈತ್ರಾ ಹಾಗೂ ಇತರರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಎಲ್ಲರನ್ನೂ 10 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುರುವಾರ ದಿನವಿಡೀ ಚೈತ್ರಾ ವಿಚಾರಣೆ ನಡೆಸಿದ್ದ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಂಜೆ ಬಿಟ್ಟು ಬಂದಿದ್ದರು.‌ ಶುಕ್ರವಾರ ಬೆಳಿಗ್ಗೆ ಪುನಃ ಚೈತ್ರಾ ಅವರನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಗೆ ಕರೆತಂದಿದ್ದರು. ಸಿಸಿಬಿ‌ ವಿಚಾರಣೆ ವೇಳೆಯಲ್ಲಿ ದಿಢೀರ್ ಕುಸಿದು ಬಿದ್ದ ಚೈತ್ರಾ ಬಾಯಲ್ಲಿ‌ ನೊರೆ ಬರಲಾರಂಭಿಸಿದೆ ಎನ್ನಲಾಗಿದೆ. ಕೂಡಲೇ ಪೊಲೀಸರು ಚೈತ್ರಾ ಅವರನ್ನು ತಮ್ಮದೇ ಜೀಪಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

Comments are closed.