ಕುಂದಾಪುರ: ಬೆಳ್ಳಾಲ ಗ್ರಾಮದ ಅಂಗಡಿಜೆಡ್ಡುವಿನಲ್ಲಿ ಮೇಯಲು ಬಿಟ್ಟಿದ್ದ ಗುಲಾಬಿ ಅವರಿಗೆ ಸೇರಿದ್ದ ದನ ಹಾಗೂ ಇತರ ದನಗಳಿಗೆ ನರಸಿಂಹ ಎನ್ನುವರು ಕೋವಿಯಿಂದ ಶೂಟ್ ಮಾಡಿದ ಪರಿಣಾಮ ದನ ಗಂಭೀರ ಗಾಯಗೊಂಡು ಸಾವನ್ನಪ್ಪಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದನಕ್ಕೆ ಶೂಟ್ ಮಾಡಿದ ಬಗ್ಗೆ ನರಸಿಂಹ ಅವವರನ್ನು ವಿಚಾರಿಸಿದಾಗ ದನಕ್ಕೆ ಹೊಡೆದ ಹಾಗೆ ನಿಮಗೂ ಹೊಡೆಯುತ್ತೇನೆ ಎಂದು ಜಿವ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದು, ಅದೇ ಗದ್ದೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮೂರು ದನ ಸತ್ತಿದೆ, 15 ದನಗಳಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.