ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೇಜಾವರ ಶ್ರೀಗಳ ಆಶೀರ್ವಾದದಿಂದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ನೇತೃತ್ವದಲ್ಲಿ 23 ವರ್ಷಗಳ ಹಿಂದೆ ಸ್ಥಾಪನೆಯಾದ ಏಕೈಕ ಸರಕಾರೇತರ ಸಂಸ್ಥೆ ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಿತಿಯನ್ನು ಸ್ಥಾಪಿಸಿದ್ದು ಸಮಿತಿಯ ನಿಸ್ವಾರ್ಥ ಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ದೊರಕಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಾಲೀನ್ಯ ರಹಿತ ಅಭಿವೃದ್ದಿಗಾಗಿ ಸಮಿತಿಯು ಹಿಂದಿನಂತೆ ಮುಂದೆಯೂ ಶಕ್ತಿ ಮೀರಿ ದುಡಿಯಲಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಡಿ. ಆರ್. ರಾಜು ನುಡಿದರು.
ಅ. 13 ರಂದು ಸಂಜೆ ಉಡುಪಿಯ ಮಾಧವ ಕೃಷ್ಣ ಸಭಾಂಗಣ, ಕಿಡಿಯೂರು ಹೋಟೆಲ್”, ಇಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಸಮಿತಿಯ ಮುಂದಿನ ಯೋಜನೆಗಳ ಮಾಹಿತಿಯನ್ನು ನೀಡಿದ ಅವರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ನಾವು ಸರಕಾರವನ್ನು ಒತ್ತಾಯಿಸುತ್ತಿದ್ದೇವೆ, ಸಮುದ್ರ ಕೊರೆತದಿಂದಾಗಿ ಅಪಾರ ಪ್ರಮಾಣದ ಕಷ್ಟ ನಷ್ಟಗಳು ಮಾತ್ರವಲ್ಲದೆ ಜೀವಹಾನಿ ಉಂಟಾಗುತ್ತಿದ್ದು ಸಮುದ್ರ ತೀರದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವುದು ಅತೀ ಅಗತ್ಯ. ಕರಾವಳಿಯ ಉಭಯ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಸೇರಿದಂತೆ ಮಂಗಳೂರಿನಲ್ಲಿ ಒಂದೇ ವಿಮಾನ ನಿಲ್ದಾಣವಿದ್ದು ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಕೇಂದ್ರೀಕತಗೊಳಿಸಿ ಈ ಭಾಗದಲ್ಲಿ ಒಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆ. ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮತ್ತು ಅಧ್ಯಕ್ಷರಾದ ಎಲ್. ವಿ. ಅಮೀನ್ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಗಳ ಅಭಿವೃದ್ದಿಗಾಗಿ ಹಾಗೂ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ಕರ್ನಾಟಕ ಸರಕಾರದ ಗಮನಕ್ಕೆ ತರುವಲ್ಲಿ ನಮ್ಮ ಸಮಿತಿಯು ಯಶಸ್ವಿಯಾಗಿದ್ದು ಸರಕಾರವು ಈ ಬಗ್ಗೆ ಕ್ರೀಯಾಶೀಲವಾಗಲು ಸರಕಾರವನ್ನು ನಾವು ಆಗಾಗ ಒತ್ತಾಯಿಸಬೇಕಾಗಿದೆ ಮತ್ತು ಅವಿಭಜಿತ ಜಿಲ್ಲೆಗಳಿಗಾಗಿ ಸಮಿತಿಯು ಕೈಗೊಂಡ ಹಾಗೂ ಕೈಗೊಳ್ಳಲಿರುವ ಎಲ್ಲಾ ಯೋಜನೆಗಳನ್ನು, ಕಾರ್ಯರೂಪಕ್ಕೆ ತರುವಲ್ಲಿ ಜಿಲ್ಲಾ ಸಮಿತಿಯು ಸದಾ ಬೆಂಬಲಿಸುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು, ಸಮಿತಿಯು ಕಳೆದ 23 ವರ್ಷಗಳಿಂದ ಮಾಡಿದ ಸಾಧನೆ ಬಗ್ಗೆ ಮಾತನಾಡುತ್ತಾ 2000ನೇ ಇಸವಿಯಲ್ಲಿ 29 ವಿವಿಧ ಸಮುದಾಯ ಸಂಘಟನೆಗಳನ್ನು ಒಟ್ಟುಗೂಡಿಸಿ ಸಮಿತಿಯನ್ನು ರಚಿಸಿದ್ದು, ಅಂದಿನ ಉಡುಪಿ ಪೇಜಾವರ ಮಠದ ಸ್ವಾಮೀಜಿಯವರು ಸಮಿತಿಗೆ ನಾಮಕರಣ ಮಾಡಿ ಆಶ್ರೀರ್ವದಿಸಿದ್ದಾರೆ. ಕುದುರೆಮುಖ ಯೊಜನೆ, ನಾಗಾರ್ಜುನ ಪವರ್ ಪ್ರಾಜೆಕ್ಟ್ ಸೇರಿದಂತೆ ಕರಾವಳಿಯ ಅಭಿವೃದ್ದಿಗಾಗಿ, ಕರಾವಳಿಯಲ್ಲಿ ಮಾಲೀನ್ಯ ರಹಿತ ಉದ್ಯಮ ಸ್ಥಪನೆಯೊಂದಿಗೆ ಉದ್ಯೋಗವಕಾಶ ದೊರೆಯುವಂತೆ ಸಮಿತಿಯು ಕೈಗೊಂಡ ಎಲ್ಲಾ ಯೋಜನೆ ಹಾಗೂ ಹೋರಾಟದ ಬಗ್ಗೆ ವಿವರಿಸಿದ ಅವರು ಮಂಗಳೂರು ವಿಮಾನ ನಿಲ್ಧಾಣದಲ್ಲಿ ರಾತ್ರಿ ವಿಮಾನ ಇಳಿಯುವಿಕೆ ಮತ್ತು ಮಂಗಳೂರು ವಿಮಾನ ನಿಲ್ಧಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ಡಾಣವಾಗಿ ಮಾರ್ಪಡಿಸುವಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಶ್ರಮ, ಸಮಿತಿಗೆ ಹಿರಿಯ ರಾಜಕಾರಿಣಿ ಕರವಾಳಿಯವರೇ ಆದ ಜಾರ್ಜ್ ಫರ್ನಾಂಡಿಸ್ ಅವರ ಕೊಡುಗೆ ಬಗ್ಗೆ, ಹಾಗೂ ಸಮಿತಿಯ ಮುಂದಿನ ಯೋಜನೆಗಳಲ್ಲಿ ಅತೀ ಮುಖ್ಯವಾದ ಮಳೆಗಾಲದಲ್ಲಿನ ಕರಾವಳಿಯ ಸಮುದ್ರ ಕೊರೆತವನ್ನು ತಡೆಗಟ್ಟಲು ಮುಂಬಯಿ ಮಾದರಿಯಂತೆ ಶಾಸ್ವತ ತಡೆಗೋಡೆ ನಿರ್ಮಾಣದ ಬಗ್ಗೆ ಆಗಾಗ ಸರಕಾರದ ಗಮನಕ್ಕೆ ತರಲು ಸಮಿತಿಯ ಪ್ರಯತ್ನದ ಬಗ್ಗೆ ವಿವರಿಸುತ್ತಾ, ಜಿಲ್ಲೆಗಳಲ್ಲಿ ಪ್ರಕ್ರತಿ ಸೌಂದರ್ಯವನ್ನು ಪರಿಗಣಿಸಿ ಪ್ರವಾಸೋದ್ಯಮದ ಅಭಿವೃದ್ಧಿ , ಮರಗಳ ಉಳಿಯುವುಕೆ ಪ್ರತಿ ಗ್ರಾಮದಲ್ಲೂ ವಿದ್ಯುತ್ ಶವಗಾರದ ನಿರ್ಮಾಣ, ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ-ಮರಗಳ ನೆಡುಯುವಿಕೆ, ಈಗೆ ಉಭಯ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸಮಿತಿಯ ದ್ಯೇಯ ಎಂದರು.
ಏರ್ ಇಂಡಿಯಾದ ಸ್ಟೇಷನ್ ಪ್ರಬಂಧಕರಾದ ನಾಗೇಶ್ ಶೆಟ್ಟಿ ಮಾಣಿಗುತ್ತು, ಸಮಿತಿಯ ಗೌರವ ಕಾರ್ಯದರ್ಶಿ ರವಿ ದೇವಾಡಿಗ, ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಹಾಗೂ ಜಿಲ್ಲಾ ಸಮಿತಿಯ ಗೌರವ ಕಾರ್ಯದರ್ಶಿ ಪ್ರೊ. ಶಂಕರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕುರು ಸುರೇಂದ್ರ ಸಾಲ್ಯಾನ್ ಪರಿಚಯಿಸಿ ಸ್ವಾಗತಿಸಿದರು., ಜಿಲ್ಲಾ ಸಮಿತಿಯ ಗೌರವ ಜತೆ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಅಭಾರ ಮಂಡಿಸಿದರು.
Comments are closed.