ಕರಾವಳಿ

ಕುಂದಾಪುರ ಶ್ರೀ ನಾರಾಯಣ ಗುರು ಯುವಕಮಂಡಲದ ನವರಾತ್ರಿ ಉತ್ಸವ: ಚಂಡಿಕಾ ಹೋಮದಲ್ಲಿ ಭಾಗಿಯಾದ ಕೆ. ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಶ್ರೀ ನಾರಾಯಣ ಗುರು ಯುವಕಮಂಡಲ ಕುಂದಾಪುರದ ವತಿಯಿಂದ ನವರಾತ್ರಿ ಪ್ರಯುಕ್ತ ‘ಕುಂದಾಪುರ ದಸರಾ’‌ ನಡೆಯುತ್ತಿದ್ದು ಇಲ್ಲಿನ ನಾರಾಯಣ ಗುರು ಕಲ್ಯಾಣ ಮಂದಿರದಲ್ಲಿ ಶ್ರೀ ದೇವಿ ಪೂಜಾಕೈಂಕರ್ಯಗಳು ಜರುಗುತ್ತಿದೆ.

ಭಾನುವಾರ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಕುಟುಂಬಿಕರು ನಡೆಸಿದ ಚಂಡಿಕಾ ಯಾಗ ಸಂಪನ್ನಗೊಂಡಿದ್ದು ಯಾಗದ ಪೂರ್ಣಾಹುತಿ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿದರು.

ಈ ಸಂದರ್ಭ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮತ್ತು ಪದಾಧಿಕಾರಿಗಳು, ಶ್ರೀ ನಾರಾಯಣ ಗುರು ಯುವಕಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ ಹಾಗೂ ಪದಾಧಿಕಾರಿಗಳು, ಬಿಲ್ಲವ ಸಮಾಜದ ಪ್ರಮುಖರಿದ್ದರು.

ಯೋಗೇಶ್ ಪೂಜಾರಿ, ಕುಟುಂಬಿಕರಿಂದ ಭಾನುವಾರ ಅನ್ನಸಂತರ್ಪಣೆ ನಡೆಯಿತು.

 

Comments are closed.