ಉಡುಪಿ: ಪರಶುರಾಮ ಮೂರ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.
ರಿಯಾಲಿಟಿ ಚೆಕ್ ಹೆಸರಲ್ಲಿ ಮೂರ್ತಿ ಮೇಲೆ ಹತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು, ರಕ್ಷಣಾ ಕವಚ, ಕಂಚಿನ ಮೂರ್ತಿಯ ಫಿನಿಶಿಂಗ್ ಲೇಪನ ಹರಿದಿದ್ದಾರೆ. ಇದರಿಂದ ಮೂರ್ತಿಯ ಮೂಲ ಸ್ವರೂಪ ವಿರೂಪಗೊಂಡಿದೆ. ಅಲ್ಲದೆ ಸರ್ಕಾರಿ ಸೊತ್ತು ನಷ್ಟ- ಸುಳ್ಳು ಸುದ್ದಿ ಹರಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಪರಶುರಾಮನ ಮೂರ್ತಿಯನ್ನು ಕಂಚಿನ ಮೂರ್ತಿ ಎಂದು ಸಾಭೀತುಪಡಿಸಲು ಹೊರಟ ಬಿಜೆಪಿ ಮೇಲೆ ದಿವ್ಯಾ ನಾಯಕ್ ಎಂಬುವವರು ದೂರು ನೀಡಿದ್ದಾರೆ. ಬಿಜೆಪಿಯು ಪರಶುರಾಮನ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ರಿಯಾಲಿಟಿ ಚೆಕ್ ಮಾಡಿದ್ದು, ಬಿಜೆಪಿಗರು ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಲು ತೆರಳಿತ್ತು. ಇದರಿಂದ ಸಾರ್ವಜನಿಕ ಆಸ್ತಿ ಹಾನಿ, ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಧಾರ್ಮಿಕ ಸ್ಥಳ ಅಪವಿತ್ರಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎರಡು ತಿಂಗಳು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
Comments are closed.