ಕುಂದಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ನಮ್ಮ ಭೂಮಿ ಸಂಸ್ಥೆ ಕುಂದಾಪುರ , ಸೆಲ್ಕೋ ಸಂಸ್ಥೆ ಮಣಿಪಾಲ ಇವರ ಸಹಯೋಗದಲ್ಲಿ ನ.14 ರಂದು ಹಟ್ಟಿಯಂಗಡಿ ಸಮೀಪದ ನಮ್ಮಭೂಮಿ ಸಂಸ್ಥೆಯಲ್ಲಿ ರೋಡ್ ಶೋ ವಾಹನಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶರ್ಮಿಳಾ ಎಸ್. ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮಭೂಮಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀನಿವಾಸ ಗಾಣಿಗ, ಶಿವಾನಂದ, ಕುಂದಾಪುರ ಸಹಾಯಕ ಶಿಶು ಯೋಜನಾಧಿಕಾರಿ ಬೇಬಿ, ಮಣಿಪಾಲ ಸೆಲ್ಕೋ ಸಂಸ್ಥೆಯ ಗುರುಪ್ರಕಾಶ್ ಶೆಟ್ಟಿ, ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ದೇವಾಡಿಗ ಉಪಸ್ಥಿತರಿದ್ದರು.
ದತ್ತು ಮಾಸಾಚಾರಣೆ, ಪೋಷಕತ್ವ, ಮಮತೆಯ ತೊಟ್ಟಿಲು, ಬಾಲ ಕಾರ್ಮಿಕತೆ, ಬಾಲ್ಯ ವಿವಾಹ, ಪೋಕ್ಸೋ, ಭಿಕ್ಷಾಟನೆ, ಮಕ್ಕಳ ಸಾಗಾಟ ಮತ್ತು ಮಾರಾಟ, ಮಕ್ಕಳ ಗ್ರಾಮಸಭೆ, ಆರ್.ಟಿ.ಇ ಶಿಕ್ಷಣ ಕಾಯ್ದೆ, ಮಕ್ಕಳ ಸಹಾಯವಾಣಿಯ ಕುರಿತು ಮಾಹಿತಿ ಹೊತ್ತ ಈ ರೋಡ್ ಶೋ ವಾಹನವು 20 ದಿನಗಳ ಕಾಲ ಉಡುಪಿ ಜಿಲ್ಲೆಯ 7 ತಾಲೂಕಿನ ಪ್ರತಿ ಗ್ರಾಮ ಮಟ್ಟದಲ್ಲೂ ಅರಿವು ಮೂಡಿಸುವ ಉದ್ದೇಶದಿಂದ ಸಂಚರಿಸಲಿದೆ ಎಂದು ಮಾಹಿತಿ ತಿಳಿಸಿದ್ದಾರೆ.
Comments are closed.