ಕುಂದಾಪುರ: ಪತ್ನಿ ನೆನಪಿಗಾಗಿ ಪತಿಯ ಪ್ರೀತಿ, ತ್ಯಾಗ ರಾಮಾಯಣ ಮಹಾಭಾರತ ಕಾಲದಿಂದ ಹಿಡಿದು ಮಾಹಿತಿ ತಂತ್ರಜ್ಞಾನ ಯುಗದವರಿಗೂ ಸಾಗಿಬಂದಿದೆ. ಪತ್ನಿ ನೆನಪಿಗಾಗಿ ಮನೆಯಲ್ಲೇ ಮೇಣದ ಪತ್ನಿ ಪ್ರತಿಕೃತಿ ಇಟ್ಟುಕೊಂಡವರೂ ಇದ್ದಾರೆ. ಇಲ್ಲೊಬ್ಬರು ದಾಂಪತ್ಯ ಜೀವನದ ಬೆಳ್ಳಿಹಬ್ಬ ಪತ್ನಿ ಬಯಕೆಯಂತೆ ನಡೆಸಿ, ಮಾದರಿ ಪತಿ ಎನಿಸಿಕೊಂಡಿದ್ದಾರೆ.
ಬಡಾಕೆರೆ ಲಕ್ಷ್ಮೀ ಜನಾರ್ದನ ಸಭಾಭವನ ಬುಧವಾರ ಇಂತಾದ್ದೊಂದು ವಿಶಿಷ್ಟ ಆಚರಣೆಗೆ ಸಾಕ್ಷಿಯಾಯಿತು. ಅಗಲಿದ ಪತ್ನಿ ಬಯಕೆಯಂತೆ ದಾಂಪತ್ಯ ಜೀವನದ 25ರ ಸಂಭ್ರಮ ಪತ್ನಿ ಛಾಯಾಪ್ರತಿಕೃತಿ ಜೊತೆ ಆಚರಿಸಿಕೊಂಡ ಚಿತ್ರ ಸೋಸಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕುಂದಾಪುರ ಸಪ್ತಗಿರಿ ಕೋಆಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಇಂತಾದ್ದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ವಿವಾಹ ಮಹೋತ್ಸವ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸಮಾ ಸಲಹೆ ಪತಿ ಪಾಲಿಸಿದ್ದಾರೆ. ಆದರೆ ಸಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿ ಚಂದ್ರಶೇಖರ್ ಪತ್ನಿ ಅಭಿಲಾಷೆ ಪತ್ನಿ ಆಶಯದಂತೆ ಈಡೇರಿಸಿ, ಮಾದರಿ ಪತಿಯಾಗಿದ್ದಾರೆ.
ಬಡಾಕೆರೆ ಶ್ರೀ ಲಕ್ಷ್ಮೀಜನಾರ್ದನ ಸಭಾಂಗಣ ಮಂಟಪದಲ್ಲಿ ಪತ್ನಿಯಷ್ಟೇ ಎತ್ತರ ಆಳ್ತನದ ಛಾಯಾಪ್ರತಿಕೃತಿ ನಿರ್ಮಿಸಿ ಪತ್ನಿಯ ಬಯಕೆ ಈಡೇರಿಸಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಪತಿ ಹಾಗೂ ಹೆಣ್ಣು ಮಕ್ಕಳ ನಡುವೆ ನಿಲ್ಲಿಸಿದ ಸಮಾ ಛಾಯಾಪ್ರತಿಕೃತಿ ಎನ್ನುವುದು ಗೊತ್ತಾಗದಷ್ಟು ನೈಜವಾಗಿದ್ದರೆ, ಭಾಗವಹಿಸಿದವರ ಹಾರೈಸಿದವರ ಕಣ್ಣೀರಿನೊಟ್ಟಿಗೆ ನಗುವೂ ಇತ್ತು ಎನ್ನೋದು ವಿಶೇಷ.
Comments are closed.