ಉಡುಪಿ: 3 ಲಕ್ಷದ 45 ಸಾವಿರ ರೂ. ಕಳ್ಳತನ ಮಾಡಿದ್ದ ಆರೋಪದ ಮೇಲೆ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಪ್ರವೀಣ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಬಾಗಲಕೋಟೆಯಲ್ಲಿ ಬಂಧಿಸಿ ಆತನ ಬಳಿಯಿದ್ದ 3,13,500 ರೂ.ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುತ್ತೂರು ನಿವಾಸಿ ಸಂತೋಷ್ ಅವರು ಪ್ರವೀಣ್ ನನ್ನ ಇತ್ತೀಚೆಗೆ ಮನೆಗೆ ನರ್ಸ್ ಆಗಿ ನೇಮಿಸಿಕೊಂಡಿದ್ದರು. ಅದೇ ದಿನ ಸಂಜೆ 6.30 ರಿಂದ 9 ಗಂಟೆಯ ನಡುವೆ ಪ್ರವೀಣ್ ನಿವಾಸದಿಂದ ನಾಪತ್ತೆಯಾಗಿದ್ದ. ಮನೆ ಹಾಗೂ ಬೊಲೆರೋ ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿದ್ದ ಒಟ್ಟು 3,45,000 ರೂ.ಗಳ ಹಣ ನಾಪತ್ತೆಯಾಗಿರುವುದು ನಂತರ ಗಮನಕ್ಕೆ ಬಂದಿದೆ.
ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಪೊಲೀಸರ ತಂಡ ಪ್ರವೀಣ್ ನನ್ನು ಬಾಗಲಕೋಟೆಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
Comments are closed.