ಪ್ರಮುಖ ವರದಿಗಳು

ಸಂಸತ್ ಭವನದಲ್ಲಿ ದುಷ್ಕೃತ್ಯವೆಸಗಿದ ಘಟನೆಯ ‘ಮಾಸ್ಟರ್ ಮೈಂಡ್’ ಲಲಿತ್ ಝಾ ಪೊಲೀಸರಿಗೆ ಶರಣು

Pinterest LinkedIn Tumblr

ಹೊಸದಿಲ್ಲಿ: ಬುಧವಾರದ ಸಂಸತ್ ಭದ್ರತಾ ಉಲ್ಲಂಘನೆ ನಡೆಸಿ ದುಷ್ಕೃತ್ಯವೆಸಗಿದ ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ಗುರುವಾರ ರಾತ್ರಿ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಈಗಾಗಲೇ ದುಷ್ಕೃತ್ಯ ಎಸಗಿದ ಮಹಿಳೆ ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಲಾಗಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಜತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಭದ್ರತಾ ಲೋಪದ ಘಟನೆಯ ಮಾಸ್ಟರ್ ಮೈಂಡ್ ಎನ್ನಲಾದ ಲಲಿತ್ ಝಾ ನಿನ್ನೆ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ. ಉನ್ನತ ಪೊಲೀಸ್ ಅಧಿಕಾರಿಗಳು ಝಾ ಪತ್ತೆಗೆ ಪ್ರಯತ್ನಿಸುತ್ತಿದ್ದರು.

ಗುರುವಾರ ರಾತ್ರಿ ಲಲಿತ್ ಝಾ ಮತ್ತೊಬ್ಬ ವ್ಯಕ್ತಿಯೊಂದಿಗೆ ಕರ್ತವ್ಯ ಪಥ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಅವರನ್ನು ವಿಶೇಷ ತನಿಖಾ ಘಟಕಕ್ಕೆ ಹಸ್ತಾಂತರಿಸಲಾಗಿದೆ.

Comments are closed.