ಕರಾವಳಿ

ಮಂಗಳೂರಿನಲ್ಲಿ 60.07 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು..!

Pinterest LinkedIn Tumblr

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರು ಪ್ರಯಾಣಿಕರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು 60.07 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ.

ಡಿ.11ರಂದು ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರ ತಪಾಸಣೆಯ ವೇಳೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 24 ಕ್ಯಾರೆಟ್‌ನ 969 ಗ್ರಾಂ. ಚಿನ್ನ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 60,07,800 ರೂ. ಎಂದು ಅಂದಾಜಿಸಲಾಗಿದೆ.

ಇಬ್ಬರು ಪ್ರಯಾಣಿಕರು ತಾವು ಧರಿಸಿದ್ದ ಶೂ ತಳಭಾಗದಲ್ಲಿ ಸೊಲ್ ರೂಪದಲ್ಲಿ ಚಿನ್ನದ ಪೇಸ್ಟ್ ನ್ನು ಅಡಗಿಸಿ ಕಳ್ಳಸಾಗಣೆಗೆ ಮಾಡಲು ಪ್ರಯತ್ನಿಸುತ್ತಿದ್ದು , ಮತ್ತೋರ್ವ ಪ್ರಯಾಣಿಕ ಚಾಕಲೇಟ್ ಬಾಕ್ಸ್ ನಲ್ಲಿ ಮತ್ತು ಬೆಡ್‌ಸ್ಪ್ರೆಡ್ ಪ್ಯಾಕೆಟ್ ನಲ್ಲಿ ಚಿನ್ನದ ಪೇಸ್ಟ್ ನ್ನು ಅಕ್ರಮ ಸಾಗಾಟ ಮಾಡಲು ಯತ್ನಿಸಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.