ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ, ಬಳಕೆ, ಸಂಗ್ರಹ ಅಡ್ಡೆಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡ ಗಾಂಜಾವನ್ನು ನ್ಯಾಯಾಲಯ ಅನುಮತಿ ಮೇರೆಗೆ ನಾಶ ಮಾಡಲಾಯಿತು.
ಒಟ್ಟು 11 ಪ್ರಕರಣದಿಂದ 10 ಕೆಜಿ 606 ಗ್ರಾಂ ಗಾಂಜಾವನ್ನು ನಗರದ ಹೊರ ವಲಯದಲ್ಲಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಮಲ್ಲೆಶ್ ದೊಡ್ಮನಿ, ಪ್ರಶಾಂತ್ ಮನ್ನೋಳಿ, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕರಾದ ರುದ್ರಪ್ಪ ಎಲ್, ಪ್ರಭಾವತಿ ಶೇತಸನಾದಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments are closed.