ಕರಾವಳಿ

ಅಕ್ರಮ‌ ಮರಳು ಸಾಗಾಟ: ಮಿನಿ ಟಿಪ್ಪರ್ ವಶಕ್ಕೆ ಪಡೆದ ಗಂಗೊಳ್ಳಿ ಪೊಲೀಸರು

Pinterest LinkedIn Tumblr

ಕುಂದಾಪುರ: ನಾಡ ಕಡೆಯಿಂದ ಮೊವಾಡಿ ಕಡೆಗೆ ಮಿನಿ ಟಿಪ್ಪರ್‌ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮಿನಿ ಟಿಪ್ಪರ್ ವಾಹನವನ್ನು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಹರೀಶ್ ಆರ್.‌ ವಶಕ್ಕೆ ಪಡೆದಿದ್ದಾರೆ.

ಟಿಪ್ಪರ್‌ ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ವಾಹನ ನಿಲ್ಲಿಸದೇ ಹೋಗಿದ್ದು ಬಳಿಕ ಚಾಲಕ ಪರಾರಿಯಾಗಿದ್ದಾನೆ. ಪರಾರಿಯಾದ ಚಾಲಕನನ್ನು ವಿಘ್ನೇಶ್ ಎಂದು ಗುರುತಿಸಲಾಗಿದೆ. 5 ಸಾವಿರ ರೂ.ಗಳ 1 ಯುನಿಟ್‌ ಮರಳಿದ್ದು ಮರಳನ್ನು ಎಲ್ಲಿಂದಲೋ ಕದ್ದು ಸಾಗಾಟ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್ ಚಾಲಕ ಪರಾರಿ..!
ಆರೋಪಿ‌ಟಿಪ್ಪರ್ ಚಾಲಕ ವಾಹನ ನಿಲ್ಲಿಸದೇ ಚಲಾಯಿಸಿಕೊಂಡು ಆನಗೋಡು ರಸ್ತೆಯ ಪಕ್ಕದಲ್ಲಿರುವ ಹಾಡಿಯೊಳಕ್ಕೆ ಟಿಪ್ಪರ್ ನಿಲ್ಲಿಸಿ ಇಳಿದು ಹಾಡಿಯಲ್ಲಿ ಓಡಿ ಪರಾರಿಯಾಗಿದ್ದು ವಾಹನವನ್ನು ಪರಿಶೀಲಿಸಿದಾಗ ಹಾಡಿಯ ಒಳಗಡೆಯಲ್ಲಿ ನುಗ್ಗಿಸಿದ ಪರಿಣಾಮ ಟಿಪ್ಪರ್ ಎದುರಿನ ಗ್ಲಾಸ್ ಗೆ ಮರದ ಕೊಂಬೆ ಬಡಿದು ಗ್ಲಾಸ್ ಜಖಂಗೊಂಡಿದ್ದು ತಿಳಿದುಬಂದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.