ಕುಂದಾಪುರ: ಪರಶುರಾಮ ಸೃಷ್ಟಿಯ ಕರಾವಳಿಯಲ್ಲಿ ನಡೆಯುವ ನಾಗಾರಾಧನೆ ಹಾಗೂ ದೈವಾರಾಧನೆಗಳಿಂದ ಶಾಂತಿ ನೆಮ್ಮದಿ ದೊರಕುತ್ತದೆ. ಊರಿನಲ್ಲಿ ನಡೆಯುವ ಕೋಲ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಸ್ಪರ ಒಗ್ಗಟ್ಟು ನಿರ್ಮಾಣಗೊಂಡು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕುಂದಾಪುರ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.
ಗುಜ್ಜಾಡಿ ದೊಡ್ಮನೆಯ ಶ್ರೀ ಯಕ್ಷೆ, ಪಂಜುರ್ಲಿ, ಹಾಯ್ಗುಳಿ ಹಾಗೂ ಪರಿವಾರ ದೈವಸ್ಥಾನದಲ್ಲಿ ಗುರುವಾರ ನಡೆದ ‘ಸಿರಿ ಸಿಂಗಾರ ಕೋಲ’ ಸೇವೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣ ಪೂಜಾರಿ ಬನವಾಸಿ, ನಾಗೇಶ್ ಕೊಡಂಚ ಗುಜ್ಜಾಡಿ, ಬಿಲ್ಲವ ಸಮಾಜದ ಮುಖಂಡ ಮಂಜಯ್ಯ ಪೂಜಾರಿ, ದೈವ ನರ್ತಕರಾದ ಸುರೇಶ್ ಪೂಜಾರಿ, ರಾಘವೇಂದ್ರ ಪೂಜಾರಿ, ರಾಘು ಪೂಜಾರಿ, ಗೋಪಾಲ ಪೂಜಾರಿ, ಸ್ಥಳೀಯ ಮುಖಂಡರಾದ ಸುರೇಶ್ ಪೂಜಾರಿ ದೊಡ್ಮನೆ, ಪ್ರಕಾಶ ಪೂಜಾರಿ ಗುಜ್ಜಾಡಿ, ರವಿ ಪೂಜಾರಿ ದೊಡ್ಮನೆ ಇದ್ದರು.
ಜಯರಾಜ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
Comments are closed.