ಕುಂದಾಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಭಾರತದ ಸಂವಿಧಾನವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಗತ್ತಿನಲ್ಲೇ ಅತೀ ಶ್ರೇಷ್ಟವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಮುಖ್ಯವಾಹಿನಿಗೆ ಬರಬೇಕು. ಸಮಬಾಳು-ಸಮಪಾಲು, ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ಅಂದು ಮಾಡಿದ ಸಂವಿಧಾನದ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಜಗತ್ತಿಗೆ ಮಾರ್ಗದರ್ಶನ ಮಾಡುವ ಸಂವಿಧಾನವು ಭಾರತಕ್ಕೆ ಸಿಕ್ಕಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ಪುರಸಭೆ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಮಂಗಳವಾರ ಕುಂದಾಪುರ ಶಾಸ್ತ್ರೀ ವೃತ್ತ ಸಮೀಪದ ತಾಲೂಕು ಪಂಚಾಯತ್ ಎದುರು ನಡೆದ ‘ಸಂವಿಧಾನ ಜಾಗೃತಿ ಜಾಥ’ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡ ಜಾಥಾ ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ವಿ. ರಾವ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರದ ಆದೇಶದಂತೆ ಈ ಜಾಥಾ ನಡೆಯುತ್ತಿದೆ. ಭಾರತದ ಪ್ರಜಾಪ್ರಭುತ್ವ ಸದೃಢವಾಗಲು ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಾಧ್ಯವಾಗಿದೆ. ಸ್ವಾತಂತ್ರ್ಯ ತರುವಾಯ ಹಲವು ಸಮಸ್ಯೆ ಗಳಿದ್ದು ಪ್ರಪಂಚದಲ್ಲಿನ ಎಲ್ಲಾ ಸಂವಿಧಾನಗಳನ್ನು ಅವಲೋಕಿಸಿ ನಮ್ಮ ದೇಶದ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಂವಿಧಾನ ರಚಿಸಲಾಗಿದೆ. ಸಂವಿಧಾನದ ಮಹತ್ವವನ್ನು ಎಲ್ಲರೂ ಅರಿಯಬೇಕು ಎಂದರು.
ದಲಿತ ಸಂಘಟನೆಯ ಮುಖಂಡರಾದ ಉದಯ ಕುಮಾರ್ ತಲ್ಲೂರು, ರಾಜು ಬೆಟ್ಟಿನಮನೆ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಘವೇಂದ್ರ ವರ್ಣೇಕರ್, ಉಪತಹಶಿಲ್ದಾರ್ ವಿನಯ್, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಯು.ಬಿ. ನಂದಕುಮಾರ್, ಪುರಸಭೆ ಸದಸ್ಯರಾದ ಪ್ರಭಾಕರ್ ವಿ., ಶ್ರೀಧರ್ ಶೇರಿಗಾರ್, ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಶೇಖರ್ ಮೊದಲಾದವರಿದ್ದರು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್. ಪ್ರಸ್ತಾವನೆಗೈದರು. ಪುರಸಭೆ ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜನ್ನಾಡಿ ನಿರೂಪಿಸಿ ವಂದಿಸಿದರು.
ಸಂವಿಧಾನ ಮುಖ್ಯ ಆಶಯವಾದ ಸಮಾನತೆ ಬೆಳೆಸಿಕೊಳ್ಳಬೇಕು. ಬೆಳೆಯುತ್ತಿರುವ ಸಮಾಜದಲ್ಲಿ ಅಸಮಾನತೆ ಆಚರಣೆಯನ್ನು ನಿಲ್ಲಿಸಬೇಕು. ಸಂವಿಧಾನದ ಅತೀ ಮುಖ್ಯ ಆಶಯಗಳನ್ನು ಪಾಲಿಸಬೇಕು. ಸಂವಿಧಾನವು ನಿತ್ಯ ಜೀವನದ ವಿಮರ್ಶೆಯಾಗಬೇಕು. ಜಾತ್ಯಾತೀತ ಮನೋಭಾವನೆ ಬೆಳೆಸಿಕೊಂಡಾಗ ನೈಜ್ಯ ಭಾರತ ಉಳಿವು ಸಾಧ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮೀರಿ ಯಾರೂ ಇಲ್ಲ. ಜನರ ಪ್ರಭುತ್ವ ಹಾಗೂ ಶ್ರೇಷ್ಟತೆ, ಸಮಾನತೆ, ಜಾತ್ಯಾತೀತ ಸ್ವಭಾವ ಅತೀ ಮುಖ್ಯವಾಗಿದೆ. ಇಲ್ಲಿ ಯಾವುದೇ ಒಂದು ಜನಾಂಗ, ಜಾತಿ ಮುಖ್ಯವಲ್ಲ ಎಂಬುದು ಅರಿಯಬೇಕು. ಜಾತ್ಯಾತೀತ ಸ್ವರೂಪ ಗಂಡಾಂತರದಲ್ಲಿದ್ದು ಇದು ತೊಡೆದುಹಾಕಬೇಕು. ಭ್ರಾತತ್ವ, ಮೈತ್ರಿ ಬೆಳೆಸಿಕೊಂಡು ಕೆಲವು ಪೂರ್ವಾಗ್ರಹಗಳಿಂದ ಹೊರಬರಬೇಕು.
– ಪ್ರದೀಪ್ ಕೆಂಚನೂರು (ಉಪನ್ಯಾಸಕರು)
ನಗರದಲ್ಲಿ ಸಂಚರಿಸಿದ ಬೃಹತ್ ಜಾಥಾ..
ಮಂಗಳವಾರ ಕುಂದಾಪುರಕ್ಕೆ ಆಗಮಿಸಿದ ‘ಸಂವಿಧಾನ ಜಾಗೃತಿ ಜಾಥಾ’ದ ರಥವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಲೂನ್ ಹಾರಿಬಿಡುವ ಮೂಲಕ ಸ್ವಾಗತಿಸಿದರು. ಕುಂದಾಪುರ
ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ರಾಜು ಎನ್. ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ರೋಹಿಣಿ ಡಿ.,ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಉಪತಹಶಿಲ್ದಾರ್ ಪ್ರಕಾಶ್, ತಾ.ಪಂ ಇಓ ಪ್ರಶಾಂತ್ ರಾವ್, ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಪುರಸಭೆಮುಖ್ಯಾಧಿಕಾರಿ ಮಂಜುನಾಥ್ ಆರ್., ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಸಮುದಾಯ ಸಂಘಟನಾ ಅಧಿಕಾರಿ ಶರತ್ ಎಸ್. ಖಾರ್ವಿ, ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜನ್ನಾಡಿ, ಸದಸ್ಯರಾದ ಪ್ರಭಾಕರ್ ವಿ., ಸಂತೋಷ್ ಶೆಟ್ಟಿ, ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರಿಗಾರ, ಶೇಖರ್ ಪೂಜಾರಿ, ಮಾಜಿ ನಾಮನಿರ್ದೇಶನ ಸದಸ್ಯರಾದ ಪ್ರಕಾಶ್ ಖಾರ್ವಿ, ರತ್ನಾಕರ ಶೇರಿಗಾರ್, ಕೊರಗ ಶ್ರೆಯೋಭಿವೃದ್ಧಿ ಸಂಘಟನೆಯ ಗಣೇಶ್ ಕೊರಗ, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಚಂದ್ರ ಅಲ್ತಾರು, ವಿಜಯ ಕೆ.ಎಸ್. ಮೊದಲಾದವರಿದ್ದರು. ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಸ್ತ್ರೀ ವೃತ್ತದಿಂದ ನಗರದಲ್ಲಿ ಸಾಗಿದ ಜಾಥಾವು ನಗರದಲ್ಲಿ ಸಾಗಿ ತಾಲೂಕು ಪಂಚಾಯತ್ ಎದುರು ಸಮಾಪನಗೊಂಡಿತು.
Comments are closed.