ಕರಾವಳಿ

ಕಾರ್ಕಳದಲ್ಲಿ ನೀರಿನ ಟ್ಯಾಂಕ್‌ ಕುಸಿದು ಮಹಿಳೆ ದಾರುಣ ಮೃತ್ಯು

Pinterest LinkedIn Tumblr

ಉಡುಪಿ: ದೇವಸ್ಥಾನದ ವಾರ್ಷಿಕ ಮಹಾಪೂಜೆ ವೇಳೆ ನೀರಿನ ಟ್ಯಾಂಕ್‌ ಕುಸಿದು ಬಿದ್ದು ಮಹಿಳೆ ಮೃತಪಟ್ಟು, ಯುವತಿ ಗಾಯಗೊಂಡ ಘಟನೆ ನಂದಳಿಕೆ ಗ್ರಾಮದ ಮಾವಿಕನಟ್ಟೆ ಎಂಬಲ್ಲಿ ನಡೆದಿದೆ.

ಮಾವಿನಕಟ್ಟೆ ನಿವಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಲತಾ ಮೊಯ್ಲಿ (50) ಮೃತರು. ತಾಯಿ ಮತ್ತು ಮಗಳು ಇಬ್ಬರು ಊರಿನ ದೇವಸ್ಥಾನದಲ್ಲಿ ನಡೆದ ವರ್ಷಾವಧಿ ಮಾರಿಪೂಜೆಗೆ ತೆರಳಿದ್ದರು. ರಾತ್ರಿ ಅನ್ನಪ್ರಸಾದ ಸ್ವೀಕರಿಸಿ, ನಳ್ಳಿ ನೀರಿನ ಬಳಿಗೆ ತೆರಳಿ ಕೈ ತೊಳೆದು ಬಟ್ಟಲು ಇಡಲೆಂದು ತೆರಳಿದ್ದ ವೇಳೆ ದೇವಸ್ಥಾನದ ಪಕ್ಕದಲ್ಲಿದ್ದ ಸಿಮೆಂಟ್‌ನ ನೀರಿನ ಟ್ಯಾಂಕ್‌ ಆಕಸ್ಮಿಕವಾಗಿ ಕುಸಿದು ಅವರ ಮೈಮೇಲೆ ಬಿದ್ದಿದೆ.

ಮಹಿಳೆ ಜತೆ ಪುತ್ರಿ ಗರ್ಭಿಣಿ ಪೂಜಾ ಇದ್ದಿದ್ದು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟರು. ಪುತ್ರಿ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.