ಉಡುಪಿ: ಸೂಕ್ತ ದಾಖಲೆಗಳಿಲ್ಲದೆ ಅನಧೀಕೃತವಾಗಿ ಗ್ರಾಹಕರಿಗೆ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ನೀಡುವ (ರೆಂಟಲ್ ಬೈಕ್/ಕಾರ್ ಶಾಪ್) ಉಡುಪಿ, ಮಣಿಪಾಲ ಪರಿಸರದ ಅಂಗಡಿಗಳ ಮೇಲೆ ಆರ್‌ಟಿಒ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಎರಡು ರೆಂಟಲ್ ಮಳಿಗೆಗಳನ್ನು ಮುಚ್ಚಿಸಿ ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದ 10-15 ರೆಂಟ್ ಕಾರುಗಳನ್ನು ತಪಾಸಣೆ ಮಾಡಿ ಮುಟ್ಟುಗೋಲು ಹಾಕಿಕೊಂಡು ಸೂಕ್ತ ಕಾನೂನು ಕ್ರಮಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾಳಿ ವೇಳೆ ಗ್ರಾಹಕರಿಂದ ಯಾವುದೇ ದಾಖಲೆಗಳನ್ನು ಪಡೆಯದೆ ವಾಹನ ನೀಡುತ್ತಿರುವ ಬಗ್ಗೆ, ವಾಹನದ ನಿರ್ವಹಣೆ ಇಲ್ಲದ ಬಗ್ಗೆ, ವಾಯುಮಾಲಿನ್ಯ ಪರೀಕ್ಷೆ, ವಿಮೆ ಪಾವತಿಸದಿರುವ ಬಗ್ಗೆ ಕಂಡುಬಂದಿದೆ ಎನ್ನಲಾಗಿದೆ.
Comments are closed.