ನವದೆಹಲಿ: ಲೋಕಸಭೆಗೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 335 ಸೀಟುಗಳನ್ನು ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ 2015ರ ಸಾಲಿಗೆ ಹೋಲಿಸಿದರೆ ಈ ಬಾರಿಯೂ ಬಾರಿ ಶೇ 70ರ ಗಡಿಯನ್ನು ದಾಟಿದೆ.
‘ಇಂಡಿಯಾ ಟುಡೆ ಮತ್ತು ಸಿ–ವೋಟರ್ ಮೂಡ್ ಆಫ್ ದ ನೇಷನ್’ ಸಮೀಕ್ಷೆಯಲ್ಲಿ ಈ ಅಂಶವು ವ್ಯಕ್ತವಾಗಿದೆ. ಜನವರಿ 2023ರ ಜನವರಿ ತಿಂಗಳಲ್ಲಿ ಈ ಸಮೀಕ್ಷೆಯು ನಡೆದಿದೆ. . 2024ರ ಲೋಕಸಭೆ ಚುನಾವಣೆಯು ಹತ್ತಿರವಾಗುತ್ತಿರುವಂತೆಯೇ ಸಮೀಕ್ಷೆ ಮಹತ್ವ ಪಡೆದಿದೆ. ಕರ್ನಾಟಕದಲ್ಲಿಯೂ 28 ಸ್ಥಾನದಲ್ಲಿ 24 ಸ್ಥಾನ ಎನ್‌ಡಿಎ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯ ಅಂದಾಜಿನಂತೆ ‘ಇಂಡಿಯಾ’ ಮೈತ್ರಿಕೂಟ 166 ಸೀಟು ಗೆಲ್ಲಲಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರುವ ಎಲ್ಲಾ ಸಾಧ್ಯತೆಯಿದೆ. ಆದರೆ, ಎನ್‌ಡಿಎಯ ಈಗಿನ ನಿರೀಕ್ಷೆಯಂತೆ 400 ಸೀಟು ಗೆಲ್ಲುವ ಗುರಿ ದಾಟುವ ಸಾಧ್ಯತೆ ಕಡಿಮೆ.
ಸಮೀಕ್ಷೆಯ ಪ್ರಕಾರ, ಸದ್ಯದಲ್ಲೇ ಲೋಕಸಭೆಗೆ ಚುನಾವಣೆ ನಡೆದರೂ ಎನ್‌ಡಿಎ ಮೈತ್ರಿಕೂಟವು 335 ಸೀಟು ಗೆಲ್ಲಲಿದೆ. ಈ ಮೂಲಕ ಸರ್ಕಾರ ರಚಿಸಲು ಸರಳ ಬಹುಮತವಾಗಿ ಬೇಕಾಗಿರುವ 272 ಸೀಟುಗಳ ಗಡಿ ದಾಟಲಿದೆ. ಆದರೆ, ಈ ಮೈತ್ರಿಕೂಟವು ಕನಿಷ್ಠ 18 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಇದರ ಅನುಕೂಲ ಇಂಡಿಯಾ ಮೈತ್ರಿಕೂಟದ ಪಕ್ಷಗಳಿಗೆ ಆಗಲಿದೆ.
‘ಮೂಡ್ ಆಫ್ ದ ನೇಷನ್‘ ಫೆಬ್ರುವರಿ 2024ರ ಸಮೀಕ್ಷೆಯನ್ನು 2023ರ ಡಿಸೆಂಬರ್ 15 ಮತ್ತು 2024ರ ಜನವರಿ 28ರ ನಡುವೆ ನಡೆಸಲಾಗಿದೆ.
ಕಾಂಗ್ರೆಸ್ ಪಕ್ಷ ಒಳಗೊಂಡ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು 166 ಸೀಟು ಗೆಲ್ಲುವ ಸಾಧ್ಯತೆಗಳಿವೆ.
ಪಕ್ಷವಾರು ಸಾಧನೆಗಳನ್ನು ಗಮನಿಸುವುದಾದರೆ ಬಿಜೆಪಿಯು ಒಟ್ಟು 543 ಸೀಟುಗಳ ಪೈಕಿ 304 ಸೀಟು ಗೆಲ್ಲುವ ಸಾಧ್ಯತೆಗಳಿವೆ. ಈ ಮೂಲಕ ಬಿಜೆಪಿಯೇ ಸ್ವತಂತ್ರವಾಗಿ ಸರಳ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ.
Comments are closed.