ಕರಾವಳಿ

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಚುನಾವಣೆಗೆ ಸಕಲ ಸಿದ್ಧತೆ: ಡಿಸಿ ವಿದ್ಯಾಕುಮಾರಿ ಕೆ.

Pinterest LinkedIn Tumblr

ಉಡುಪಿ: ಲೋಕಸಭಾ ಚುನಾವಣೆಯನ್ನು ನ್ಯಾಯ ಸಮತ ಹಾಗೂ ನಿರ್ಭೀತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಅವರು ತಿಳಿಸಿದರು.

ಅವರು ಶನಿವಾರ ಉಡುಪಿಯ ರಜತಾದ್ರಿಯ ಕೆಸ್ವನ್ ಕೇಂದ್ರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಉಡುಪಿ ಜಿಲ್ಲಾ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಪೂರ್ವ ಸಿದ್ಧತೆ ಕುರಿತ ಅಂತರ್ ಜಿಲ್ಲಾ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದರು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಗರ ವ್ಯಾಪ್ತಿಯಲ್ಲಿ 26 ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 220 ಓಟ್ಟು246 ಮತಗಟ್ಟೆಗಳಿದ್ದು ,11 6310 ಪುರುಷರು,1 21413 ಮಹಿಳೆಯರು 3 ತೃತೀಯ ಲಿಂಗದವರು ಸೇರಿದಂತೆ ಒಟ್ಟು 2,37,726 ಮತದಾರರು ಇದ್ದಾರೆ ಎಂದರು. ಜಿಲ್ಲೆಯಲ್ಲಿ 246 ಮತದಾನ ಕೇಂದ್ರಗಳಿದ್ದು ಅವುಗಳಲ್ಲಿ 42 ಸೂಕ್ಷ್ಮ 12 ಅತಿಸೂಕ್ಷ್ಮ 190 ಸಾಮಾನ್ಯ ಮತದಾನ ಕೇಂದ್ರಗಳಿವೆ ಎಂದ ಅವರು ಎಂ.ಸಿ.ಸಿ ಉಲ್ಲಂಘನೆಯ ದೂರು ನಿರ್ವಹಣೆಗೆ ಸಹಾಯಕ ಚುನಾವಣೆ ಅಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ 24*7 ಕಾರ್ಯ ನಿರ್ವಹಿಸಿದ್ದು ಸಂಖ್ಯೆ 18004252099 ಆಗಿರುತ್ತದೆ ಎಂದರು. ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಎಫ್ .ಎಸ್ .ಟಿ ,ವಿ .ಎಸ್. ಟಿ ,ಎಸ್ ,ಎಸ್, ಟಿ ಸೇರಿದಂತೆ 21ಜನ ಸೆಕ್ಟರ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ ಎಂದರು.

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದವರು ಈ ಕಾರ್ಯಕ್ಕೆ ಚುನಾವಣಾ ವೆಚ್ಚ ನಿಗಾ ಸಮಿತಿ, ಎಂ.ಸಿ.ಎಂ.ಸಿ ಸಮಿತಿ ಹಾಗೂ ಸಿವಿಜಲ್ ಸಮಿತಿಯು ಸಹಾಯಕ ಚುನಾವಣೆ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯಲಿದೆ ಎಂದರು.

ಚುನಾವಣಾ ಅಕ್ರಮಗಳನ್ನು ತಡೆಯಲು 26 ಅಂತರ್ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಳನ್ನು ತೆರೆಯಲಾಗಿದೆ ,ಎರಡು ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು , ಪೊಲೀಸ್, ಫಾರೆಸ್ಟ್ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಇ.ವಿ.ಎಂ ಹಾಗೂ ವಿ.ವಿಪ್ಯಾಟ್ಗಳನ್ನು ರಾಂಡಮೈಜೇಶನ್ ಮಾಡುವ ಮೂಲಕ ಹಂಚಿಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಶಿವಮೊಗ್ಗ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್. ಕೆ, ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ , ಉಡುಪಿಯ ಅಪರ ಜಿಲ್ಲಾಧಿಕಾರಿ ಮಮತ ದೇವಿ, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಹಾಗೂ ಚುನಾವಣಾ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.