ಕರ್ನಾಟಕ

ಮತದಾನೋತ್ತರ ಸಮೀಕ್ಷೆ-2024: ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ!- ಹ್ಯಾಟ್ರಿಕ್ ಪ್ರಧಾನಿ ಮೋದಿ: ಕರ್ನಾಟಕದಲ್ಲೂ ಎನ್.ಡಿ.ಎ ಜಯಭೇರಿ!

Pinterest LinkedIn Tumblr

ನವದೆಹಲಿ: ದೇಶದಲ್ಲಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ಈ ಬಾರಿಯು ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಸಮೀಕ್ಷೆಗಳು ವಿವರಗಳು:
ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳು ಎನ್‌ಡಿಎಗೆ 371 ಸ್ಥಾನಗಳು, ಇಂಡಿಯಾ ಬ್ಲಾಕ್‌ಗೆ 125 ಮತ್ತು ಇತರರಿಗೆ 47 ಸ್ಥಾನಗಳನ್ನು ಭವಿಷ್ಯ ನುಡಿದಿವೆ.

ಪೋಲ್ ಫಲಿತಾಂಶಗಳು: NDA 362-392; ಇಂಡಿಯಾ: 141-161; ಇತರೆ-10-20
ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಎಕ್ಸಿಟ್ ಪೋಲ್ : NDA-353-368; ಇಂಡಿಯಾ ಬ್ಲಾಕ್-118-133; ಇತರೆ-43-48
ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಎಕ್ಸಿಟ್ ಪೋಲ್ ಫಲಿತಾಂಶ: NDA-359; ಇಂಡಿಯಾ ಬ್ಲಾಕ್-154; ಇತರೆ-30
ಸ್ಕೂಲ್ ಆಫ್ ಪಾಲಿಟಿಕ್ಸ್ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಸುಮಾರು 367-403 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಕಾಂಗ್ರೆಸ್ ನೇತೃತ್ವದ ಭಾರತ 129-161 ಸ್ಥಾನಗಳನ್ನು ಗಳಿಸಬಹುದು. ಇತರರು 7-18 ಸ್ಥಾನಗಳನ್ನು ಗೆಲ್ಲಬಹುದು. NDA ಯ ಮತ ಹಂಚಿಕೆಯು ಸುಮಾರು 49.30%, ಭಾರತ 38.4% ಮತ್ತು ಇತರರು 12.3% ಆಗಿರಬಹುದು.
ಟಿವಿ9-ಪೋಲ್‌ಸ್ಟ್ರಾಟ್ ಸಮೀಕ್ಷೆಗಳ ಪ್ರಕಾರ, ತಮಿಳುನಾಡಿನಲ್ಲಿ ಎನ್‌ಡಿಎ ಸುಮಾರು ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು. ಡಿಎಂಕೆ-ಕಾಂಗ್ರೆಸ್‌ನ ಇಂಡಿಯಾ ಬ್ಲಾಕ್ ಸುಮಾರು 34 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಇತರರು ಒಂದು ಸ್ಥಾನವನ್ನು ಗೆಲ್ಲಬಹುದು ಎಂದಿದೆ.

ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಭವಿಷ್ಯ ನುಡಿದಿವೆ.

ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಇಂತಿದೆ:

India News – D-Dynamics (ಇಂಡಿಯಾ ನ್ಯೂಸ್ ಡಿ-ಡೈನಮಿಕ್ಸ್)

ಎನ್ ಡಿಎ- 371

INDIA- 125

ಇತರೆ- 47

Jan Ki Baat (ಜನ್ ಕಿ ಬಾತ್)

NDA-362-392

INDIA Bloc-141-161

Republic Bharat-Matrize (ರಿಪಬ್ಲಿಕ್ ಭಾರತ್- ಮಾಟ್ರೆಜ್)

ಎನ್ ಡಿಎ-353-368

INDIA-118-133

ಇತರೆ-43-48

Republic TV- P Marq (ರಿಪಬ್ಲಿಕ್ ಟಿವಿ -ಪಿ ಮಾರ್ಕ್ಯೂ)

ಎನ್ ಡಿಎ -359

INDIA-154

ಇತರೆ-30

TV5 Telugu (ಟಿವಿ 5 ತೆಲುಗು)

ಎನ್ ಡಿಎ-359

INDIA-154

ಇತರೆ- 30

Newsnation (ನ್ಯೂಸ್ ನೇಶನ್)

ಎನ್ ಡಿಎ: 342-378

India: 153-169

ಇತರೆ: 21-23

ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೇ ಹೆಚ್ಚು ಸ್ಥಾನ, ಕಾಂಗ್ರೆಸ್‌ಗೆ ಕೊಂಚ ಲಾಭ!
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಬಹುತೇಕ‌ 20 ಕ್ಕೂ ಅಧಿಕ ಸ್ಥಾನ ಬಿಜೆಪಿ ಪಡೆಯಲಿದೆ ಎನ್ನಲಾಗುತ್ತಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು ಹೆಚ್ಚಿನ ಸ್ಥಾನಗಳು ಸಿಗುವುದಿಲ್ಲ ಎಂದು ಸರ್ವೇಗಳು ಹೇಳುತ್ತಿದೆ.

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಮೂರು ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಗೆ 3-8 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ.

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಎನ್ ಡಿಎ ಮೈತ್ರಿಕೂಟಕ್ಕೆ ರಾಜ್ಯದಲ್ಲಿ 23-25 ಸ್ಥಾನಗಳು ಪಡೆಯಲಿದ್ದರೆ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ 3-5 ಸ್ಥಾನಗಳು ಸಿಗಲಿದೆ.

ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಎನ್ ಡಿಎ 19-25 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಕಾಂಗ್ರೆಸ್ 4-8 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ನ್ಯೂಸ್ 18 ಸಮೀಕ್ಷೆಯ ಪ್ರಕಾರ, ಎನ್ ಡಿಎ 23-26 ಸ್ಥಾನಗಳು ಸಿಗಲಿದ್ದರೆ, ಕಾಂಗ್ರೆಸ್ ಗೆ 3-7 ಸ್ಥಾನಗಳು ಸಿಗಲಿದೆ.

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ನೇರ ಹಣಾಹಣಿ ಏರ್ಪಟ್ಟಿತ್ತು. 2019 ರಲ್ಲಿ ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಗೆದ್ದಿತ್ತು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಬಹುತೇಕ ಸರ್ವೇಗಳ ಪೈಕಿ ಜೆಡಿಎಸ್ 2 ಸ್ಥಾನ ಪಡೆಯಲಿದೆ ಎಂದು ಹೇಳಲಾಗುತ್ತಿದೆ.

Comments are closed.