ಕರಾವಳಿ

ಕಮಲಶಿಲೆ ಗೋಶಾಲೆಯಲ್ಲಿ ಗೋಕಳವಿಗೆ ಯತ್ನಿಸಿದ್ದ ಇಬ್ಬರ ಸೆರೆ: ‘ಸೈನ್ ಇನ್ ಸೆಕ್ಯೂರಿಟಿ’ ಸಿಸಿಟಿವಿ ಲೈವ್‌ನಿಂದ ತಪ್ಪಿದ್ದ ಕಳವು ಕುಕೃತ್ಯ!

Pinterest LinkedIn Tumblr

ಕುಂದಾಪುರ: ಕಮಲಶಿಲೆ ದೇವಸ್ಥಾನ ಗೋಶಾಲೆಯಲ್ಲಿ ಗೋಕಳವಿಗೆ ಯತ್ನಿಸಿ ಪರಾರಿಯಾದ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಪ್ರಕರಣ ಬೆನ್ನತ್ತಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ಮೂಲದ ವಾಜೀದ್ ಜೆ. (26) ಬಜ್ಪೆಯ ಫೈಜಲ್ (40) ಎನ್ನುವರನ್ನು ಜೂ. 22 ರಂದು ಬಂಧಿಸಿದ ಶಂಕರನಾರಾಯಣ ಠಾಣೆ ಪೊಲೀಸರು ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಡೈ ಕ್ರೆಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಹಿನ್ನೆಲೆ: ಜೂ.16 ರಂದು ಬೆಳಗ್ಗಿನ ಜಾವ 2:30 ಗಂಟೆಗೆ ಕಮಲಶಿಲೆ ದೇವಸ್ಥಾನ ಗೋಶಾಲೆಯ ಬಳಿ ಯಾರೋ ದನಕಳವು ಮಾಡಲು ಬಂದಿರುವುದಾಗಿ ಕುಂದಾಪುರದಲ್ಲಿ ಕಾರ್ಯಚರಿಸುವ ‘ಸೈನ್ ಇನ್ ಸೆಕ್ಯೂರಿಟಿ’ ಸಿಸಿ ಟಿವಿ ಲೈವ್ ಮಾನಿಟರಿಂಗ್ ಖಾಸಗಿ ಸಂಸ್ಥೆ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಹಗೂ ಸಂಬಂಧಪಟ್ಟವರಿಗೆ ತಕ್ಷಣ ಮಾಹಿತಿ ನೀಡಿದ್ದು ಅದರಂತೆ ಸೆಕ್ಯೂರಿಟಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಪರಾರಿಯಾಗಿದ್ದರು. ಸೆಕ್ಯೂರಿಟಿ ಗಾರ್ಡ್ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ ನಾಸೀರ್ ಹುಸೇನ್ ಮತ್ತು ತನಿಖಾ ಪಿಎಸ್ಐ ಶಂಭುಲಿಂಗಯ್ಯ ಎಂ. ಇ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.