ಕರಾವಳಿ

ಖ್ಯಾತ ವೈದ್ಯ, ಕುಂದಾಪುರ ಮಾತಾ ಆಸ್ಪತ್ರೆ ಮತ್ತು ಪರಿವರ್ತನಾ ಫೌಂಡೇಶನ್ ಕೋಟದ ಪ್ರವರ್ತಕರಾದ ಡಾ.ಸತೀಶ್ ಪೂಜಾರಿ ನಿಧನ

Pinterest LinkedIn Tumblr

ಕುಂದಾಪುರ: ಖ್ಯಾತ ವೈದ್ಯರು, ಕುಂದಾಪುರ ಮಾತಾ ಆಸ್ಪತ್ರೆ ಮತ್ತು ಪರಿವರ್ತನಾ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಡಾ.ಸತೀಶ್ ಪೂಜಾರಿ (54) ಇವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು.

ಮನಸ್ಮಿತ ಫೌಂಡೇಶನ್ ಮೂಲಕ ಉತ್ತಮ ಕಾರ್ಯಕ್ರಮ ಸಂಯೋಜಕರಾಗಿ ವೈದ್ಯ ವೃತ್ತಿ ಜೊತೆಗೆ ಹಾಡುಗಾರರಾಗಿದ್ದ ಅವರು ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ‌ ಸಂಯೋಜಕರಾಗಿದ್ದರು. ಮೃತರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಖ್ಯಾತ ಗಾಯಕಿಯರಾದ ಎಸ್. ಜಾನಕಿ, ವಾಣಿಜಯರಾಂ ಸಹಿತ ಪ್ರಮುಖರನ್ನು ಕುಂದಾಪುರಕ್ಕೆ ಕರೆಸಿ ದೊಡ್ಡದೊಂದು ಕಾರ್ಯಕ್ರಮ ಆಯೋಜಿಸಿದ ಹೆಗ್ಗಳಿಕೆ ಇವರದ್ದಾಗಿತ್ತು. ಕುಂದಾಪುರ ಕನ್ನಡ ಹಾಡಿನ ಆಲ್ಬಮ್ ಸಾಂಗ್ ಮಾಡಿದ್ದರು. ಕುಂದಾಪುರ ಐಎಂಎ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Comments are closed.