ಕರಾವಳಿ

ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ಬಂಟ್ವಾಳ‌ ಮೂಲದ ಮಹಿಳೆಯನ್ನು ಬಂಧಿಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಕಾಪು ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಆರೋಪಿಯೊಬ್ಬನ ಆಪ್ತ ಮಹಿಳೆಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲ್ ಸಫಾರ(35) ಎಂದು ಗುರುತಿಸಲಾಗಿದೆ.

ಗರುಡ ಗ್ಯಾಂಗ್‌ ಸದಸ್ಯರಿಗೆ ಸಫಾರ ಆರ್ಥಿಕ ನೆರವು ಮತ್ತು ಆಶ್ರಯ ವ್ಯವಸ್ಥೆ ಮಾಡಿದ್ದಳು. ಗ್ಯಾಂಗ್ ಸದಸ್ಯರಿಗೆ ಮೊಬೈಲ್‌ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಸಫಾರ ಮೇಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಸದ್ಯ ಅರೊಪಿಯನ್ನು ಮಂಗಳೂರಿನ ಕಾರಾಗೃಹದಲ್ಲಿ ಇರಿಸಲಾಗಿದೆ.

Comments are closed.