ಕರಾವಳಿ

ಗಂಗೊಳ್ಳಿ: ಮನೆಯ ಹಿತ್ತಲಿನಲ್ಲಿ ಪತ್ತೆಯಾದ 11 ಅಡಿ ಉದ್ದದ ಹೆಬ್ಬಾವು ಸೆರೆ

Pinterest LinkedIn Tumblr

ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮದ ಲ್ಯೆಟ್ ಹೌಸ್ ಸಮೀಪದ ಗದ್ದೆ ಮನೆ ನರಸಿಂಹ ಪೂಜಾರಿ ಎನ್ನುವರ ಮನೆಯ ಹಿತ್ತಲಿನಲ್ಲಿ 16 ಕೆಜಿ ತೂಕದ 11 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿತ್ತು.

ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕ‌ ಆನಂದ ಬಳೆಗಾರ, ಸ್ಥಳೀಯರಾದ ಗಣೇಶ್ ಖಾರ್ವಿ, ವಿಶ್ವನಾಥ ಗಂಗೊಳ್ಳಿ, ಸುಂದರ ಪಿ, ನಾಗೇಂದ್ರ, ಮಡಿ ನಾಗರಾಜ ಖಾರ್ವಿ, ವಿಶ್ವನಾಥ ಪೂಜಾರಿ, ರತ್ನಾಕರ ಪೂಜಾರಿ, ಸಂದೀಪ ಪೂಜಾರಿ, ರಾಜು ಪೂಜಾರಿ ಮತ್ತಿತರರು ಪಾಲ್ಗೊಂಡರು.

Comments are closed.