ಪ್ರಮುಖ ವರದಿಗಳು

ವಯನಾಡು ಭೂಕುಸಿತದಲ್ಲಿ 275 ಮಂದಿ ಸಾವು, 240 ಮಂದಿ ನಾಪತ್ತೆ

Pinterest LinkedIn Tumblr

ಕೇರಳ: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 275ಕ್ಕೆ ಏರಿಕೆಯಾಗಿದೆ ಮತ್ತು 240 ಮಂದಿ ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ. ಭೀಕರ ಭೂಕುಸಿತದಲ್ಲಿ ನೂರಾರು ಜನ ಗಾಯಗೊಂಡಿದ್ದು, ಸಾವಿರಾರು ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನೆಲಸಮವಾಗಿರುವ ಮನೆಗಳು, ಜಖಂಗೊಂಡ ವಾಹನಗಳು, ಬಂಡೆಗಳು, ನೆಲಕ್ಕುರುಳಿರುವ ಬೃಹತ್ ಮರಗಳು ಮತ್ತು ಮಣ್ಣು ಮಿಶ್ರಿತ ನೀರು ಎಲ್ಲೆಡೆ ಕಾಣಿಸುತ್ತಿದೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 275ಕ್ಕೆ(ಅಧಿಕೃತ ಸಂಖ್ಯೆ 167) ಏರಿಕೆಯಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಅಲ್ಲದೆ 240 ಮಂದಿ ಕಾಣೆಯಾಗಿದ್ದಾರೆ(ಅಧಿಕೃತ ಸಂಖ್ಯೆ 191) ಎಂದು ವರದಿಗಳು ತಿಳಿಸಿವೆ.

ಮುಂಡಕ್ಕೈನಲ್ಲಿ, ಸುಮಾರು ಶೇ. 90 ರಷ್ಟು ಮನೆಗಳು ನಾಶವಾಗಿವೆ. 10 ಅಡಿ ಎತ್ತರದವರೆಗೆ ಮಣ್ಣಿನಿಂದ ತುಂಬಿವೆ. ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್), ಕೋಸ್ಟ್ ಗಾರ್ಡ್, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಪೊಲೀಸ್, ಸಿವಿಲ್ ಡಿಫೆನ್ಸ್ ಫೋರ್ಸ್ ಮತ್ತು ವಿವಿಧ ಎನ್‌ಜಿಒಗಳ ಸ್ವಯಂಸೇವಕರು ಮೊಣಕಾಲು ಉದ್ದದ ಕೆಸರಿನಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆದಿದೆ.

Comments are closed.