ಕುಂದಾಪುರ: ಕಾಳಿಂಗ ಸರ್ಪವನ್ನೇ ಹೆಬ್ಬಾವೊಂದು ನುಂಗಲು ಹವಣಿಸಿದ್ದು, ಕೊನೆಗೂ ಅದರಲ್ಲಿ ವಿಫಲವಾದ ಘಟನೆ ಜಡ್ಕಲ್ ಗ್ರಾಮದ ಹಳನೀರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಕೊನೆಗೆ ಎರಡೂ ಹಾವುಗಳನ್ನು ಬೇರ್ಪಡಿಸಿ, ಅಂಪಾರಿನ ಸ್ನೇಕ್ ಶಂಕರ್ ಅವರು, ಸ್ಥಳೀಯರ ಸಹಕಾರದೊಂದಿಗೆ ಅವುಗಳನ್ನು ಹಿಡಿದು, ಆನೆಝರಿ ಕಡೆಗೆ ಕೊಂಡೊಯ್ದು ಬಿಟ್ಟಿದ್ದಾರೆ.
ಹಳನೀರಿನ ಮುತ್ತಮ್ಮ ಶೆಡ್ತಿ ಅವರ ಮನೆಯ ಹತ್ತಿರದ ಗದ್ದೆಯಲ್ಲಿ ಹೆಬ್ಬಾವು ಕಾಳಿಂಗ ಸರ್ಪದ ತಲೆಯನ್ನು ನುಂಗಿದ್ದು, ಬಳಿಕ ನುಂಗಲು ಆಗದೇ, ಹಾಗೇ ಸರ್ಪವನ್ನು ಸುತ್ತು ಹಾಕಲು ಪ್ರಯತ್ನಿಸುತ್ತಿದ್ದರೆ, ಹೆಬ್ಬಾವಿನ ಬಾಲವನ್ನು ಕಾಳಿಂಗ ಸರ್ಪವೂ ಸುತ್ತುಹಾಕಿಕೊಂಡಿತ್ತು. ಈ ವೇಳೆ ಸ್ಥಳೀಯರು ಗಮನಿಸಿ, ಕೂಡಲೇ ಸ್ನೇಕ್ ಶಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ.
Comments are closed.