ಕರಾವಳಿ

ಉಡುಪಿಯ ಸಾಸ್ತಾನದಿಂದ ಸತತ 14 ನೇ ವರ್ಷದ ಬ್ರಹತ್ ತಿರುಪತಿ ಪಾದಯಾತ್ರೆ

Pinterest LinkedIn Tumblr

ಕುಂದಾಪುರ: ವೆಂಕಟೇಶ್ವರ ಸ್ವೀಟ್ಸ್ ಉಡುಪಿ ಇದರ ಮಾಲಕರಾದ ಪಿ. ಲಕ್ಷ್ಮೀನಾರಾಯಣ ರಾವ್ ಅವರ ಸಾರಥ್ಯದಲ್ಲಿ 14ನೇ ವರ್ಷದ ಬ್ರಹತ್ ತಿರುಪತಿ ಪಾದಯಾತ್ರೆಯು ಆಗಸ್ಟ್ 10 ರಿಂದ ಆರಂಭಗೊಂಡು 18 ದಿನ ಈ ಪಾದಯಾತ್ರೆಯು ಕ್ರಮಿಸಲಿರುವುದು.

ಮೊದಲ ದಿನ ಸಾಸ್ತಾನದಿಂದ ಹಿರಿಯಡಕ ವೀರಭದ್ರ ದೇವಸ್ಥಾನದಲ್ಲಿ ಉಳಿದು, ಹಾಗೆ ಅಲ್ಲಿಂದ ಒಂದೊಂದು ದಿನ ಹೊಸ್ಮಾರು ಲಕ್ಷ್ಮೀ ವೆಂಕಟರಮಣ ಭಜನಾ ಮಂದಿರ, ಧರ್ಮಸ್ಥಳ ಗಂಗೋತ್ರಿ ಹಾಲ್, ಗುಂಡ್ಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಸಕಲೇಶಪುರ ಓಂ ಮಂದಿರ ಹಾಲ್, ಹಾಸನ ಬನಶಂಕರಿ ಕಲ್ಯಾಣ ಮಂಟಪ,ಚೆನ್ನರಾಯಪಟ್ಟಣ ಗಣಪತಿ ಪೆಂಡಾಲ್, ಬೆಳ್ಳೂರು ಕ್ರಾಸ್,ಕುಣಿಗಲ್ ಲಕ್ಷ್ಮೀರಂಗನಾಥ ಹಾಲ್,ಹುಲಿಕುಂಟೆ, ನಂದಿಗ್ರಾಮ ಸಮುದಾಯ ಭವನ,ಕೈವಾರ, ರಾಯಲ್ ಪಾಡು ಶಾಲೆ, ಚಿಂತಪರ್ತಿ ಹಾಲ್, ಬಾಕ್ರಪೇಟೆ ಶಾಲೆ, ಶ್ರೀನಿವಾಸ ಮಂಗಾಪುರ, ಕೊನೆಯ ದಿನ, ಶ್ರೀನಿವಾಸ ಮಂಗಾಪುರದಿಂದ ತಿರುಮಲ ತಲುಪಿ ದೇವರ ದರ್ಶನ ಪಡೆಯುವರು.

ಈ ಪಾದಯಾತ್ರೆ ಯಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಪಾದಯಾತ್ರೆ ಮಾಡುವರು,ತಿರುಪತಿ ತಲುಪುವ ತನಕ ಸಂಪೂರ್ಣ ಜವಾಬ್ದಾರಿ ವೆಂಕಟೇಶ್ವರ ಸ್ವೀಟ್ಸ್ ನವರದ್ದೇ ಆಗಿದೆ.ಬೆಳಗ್ಗಿನ ಉಪಹಾರ, ಮಧ್ಯಾಹ್ನ ಭೋಜನ, ಹಾಗೂ ಸಂಜೆ ಉಪಹಾರ, ರಾತ್ರಿ ಊಟ ಕುಡಿಯುವ ನೀರಿನ ವ್ಯವಸ್ಥೆ,ಎಲ್ಲವನ್ನು ವೆಂಕಟೇಶ್ವರ ಸ್ವೀಟ್ಸ್ ನವರೇ ಮಾಡುವರು.

ಪಾದಯಾತ್ರೆ ಹೋಗುವ ದಾರಿಯಲ್ಲಿ ಪಾದಯಾತ್ರಿಗಳು ಏನಾದರೂ ಶ್ರಮ ಸೇವೆ ಮಾಡುತ್ತಾ ಹೋಗುತ್ತಾರೆ. ಸೇವ್ ಬ್ಲಡ್ ರಕ್ತದಾನದ ಬಗ್ಗೆ ಅರಿವು,
ಪ್ರಾಣಿ ಪಕ್ಷಿ ಗಳಿಗೆ ಆಹಾರ ನೀಡುವುದು, ಭಿಕ್ಷುಕರಿಗೆ ಆಹಾರ ನೀಡುವುದು, ಬಸ್ ಸ್ಟಾಂಡ್ ಸ್ವಚ್ಛತೆ ಮಾಡುವುದು, ವಯಸ್ಸಾದವರಿಗೆ ಏನಾದ್ರು ಕೆಲಸದ ಸಹಾಯ ಮಾಡುತ್ತಾ ಹೋಗುತ್ತಾರೆ.

Comments are closed.