ಕರಾವಳಿ

ಕುಂದಾಪುರ ನಗರ ಠಾಣೆ ನೂತನ ಇನ್ಸ್‌ಪೆಕ್ಟರ್ ಆಗಿ ನಂಜಪ್ಪ ಎನ್. ನೇಮಕ

Pinterest LinkedIn Tumblr

ಕುಂದಾಪುರ: ಕಳೆದ 26 ದಿನಗಳಿಂದ ಖಾಲಿಯಾಗಿದ್ದ ಕುಂದಾಪುರ ನಗರ ಪೊಲೀಸ್ ಠಾಣೆ ನಿರೀಕ್ಷಕ ಹುದ್ದೆಗೆ ನಂಜಪ್ಪ ಎನ್. ಅವರನ್ನು ನೇಮಿಸಿ ಆದೇಶಿಸಲಾಗಿದೆ.

2003ರಲ್ಲಿ ಪಿಎಸ್ಐ ಆಗಿ ಸೇವೆಗೆ ನಿಯುಕ್ತಿಯಾದ ನಂಜಪ್ಪ ಅವರು ಶಿವಮೊಗ್ಗ, ದಾವಣಗೆರೆ, ಹಾವೇರಿ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದು ಬಳಿಕ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿದ್ದು ಕಡೂರು, ಭದ್ರಾವತಿಯಲ್ಲಿ ಹಾಗೂ ಪ್ರಸ್ತುತ 4 ವರ್ಷದಿಂದ ಗಂಗೊಳ್ಳಿ ಕರಾವಳಿ ಕಾವಲು‌ಪಡೆಯ ಇನ್ಸ್‌ಪೆಕ್ಟರ್ ಆಗಿದ್ದಾರೆ.

ಕುಂದಾಪುರ ನಗರ ಠಾಣೆಯ ಹಿಂದಿನ ಪೊಲೀಸ್ ನಿರೀಕ್ಷಕ ನಂದಕುಮಾರ್ ಅವರಿಗೆ ಜು.31 ರಂದು ವಯೋನಿವೃತ್ತಿಯಾಗಿದ್ದು ಅಲ್ಲಿಂದ ಠಾಣೆಗೆ ಇನ್ಸ್‌ಪೆಕ್ಟರ್ ಇರಲಿಲ್ಲ.

Comments are closed.