ಕರಾವಳಿ

ಮಣಿಪಾಲದ ಅಪಾರ್ಟ್‌ಮೆಂಟ್’ನಲ್ಲಿ ವಿದ್ಯಾರ್ಥಿಯ ದುಬಾರಿ ಲ್ಯಾಪ್‌ಟಾಪ್‌, ಐಪಾಡ್ ಕದ್ದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಅಪಾರ್ಟ್‌ಮೆಂಟ್’ನಲ್ಲಿ ವಾಸವಿದ್ದ ವಿದ್ಯಾರ್ಥಿಯ ದುಬಾರಿ ಲ್ಯಾಪ್‌ಟಾಪ್ ಹಾಗೂ ಐಪಾಡ್ ಕಳ್ಳತನ ಮಾಡಿದ್ದ ಕಳ್ಳರಿಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತಮಿಳುನಾಡಿನ ತಿರುಪತ್ತೂರು ನಿವಾಸಿ ಬಾಲನ್ (34) ಮತ್ತು ಆಂಧ್ರಪ್ರದೇಶದ ಚಿತ್ತೂರು ನಿವಾಸಿ ಕಾರ್ತಿಕ್ (28) ಬಂಧಿತರು.

ಆಗಸ್ಟ್ 31 ರಂದು ಮಣಿಪಾಲ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟೊಂದರಲ್ಲಿ ವಾಸವಿರುವ ವಿದ್ಯಾರ್ಥಿಯ ಸುಮಾರು 4 ಲಕ್ಷ ರೂ. ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು ಒಂದು ಆಪಲ್ ಕಂಪನಿಯ ಐಪಾಡ್ ಕಳ್ಳತನವಾಗಿದ್ದು, ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ಮಣಿಪಾಲ ಪೊಲೀಸ್ ಠಾಣೆ ನಿರೀಕ್ಷಕ ಟಿ.ವಿ ದೇವರಾಜ್ ನೇತೃತ್ವದಲ್ಲಿ ಪಿಎಸ್ಐಗಳಾದ ರಾಘವೇಂದ್ರ, ಅಕ್ಷಯ ಕುಮಾರಿ, ಎ.ಎಸ್.ಐ ವಿವೇಕಾನಂದ, ಸಿಬ್ಬಂದಿಗಳಾದ ಇಮ್ರಾನ್, ಸುಕುಮಾರ್ ಶೆಟ್ಟಿ, ರಘು ಅವರ ತಂಡವನ್ನು ರಚಿಸಲಾಗಿತ್ತು. ಈ ತಂಡವು ಸೆಪ್ಟೆಂಬರ್ 2 ರಂದು ಕಳ್ಳತನ ಪ್ರಕರಣದ ಆರೋಪಿಗಳಾದ ಪಿ ಕಾರ್ತಿಕ್ ಮತ್ತು ಬಾಲನ್ ಗೋವಿಥಾನ್ ಇವರನ್ನು ಉಡುಪಿ ಜಿಲ್ಲೆಯ ಕಟಪಾಡಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು, ಆರೋಪಿಗಳಿಂದ ವಸ್ತುಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.

ಮಣಿಪಾಲ ನಗರದಲ್ಲಿ ಅನೇಕ ಅಪಾರ್ಟಮೆಂಟ್‌ ಗಳಿದ್ದು, ಬಹುತೇಕ ವಿದ್ಯಾರ್ಥಿಗಳು ಇಲ್ಲಿ ವಾಸವಿದ್ದಾರೆ. ವಿದ್ಯಾರ್ಥಿಗಳು ಅವರು ಬಳಸುವ ಬೆಲೆಬಾಳುವ ಎಲೆಕ್ಟ್ರಾನಿಕ್‌ ಸಾಧನಗಳಾದ ಲ್ಯಾಪ್‌ ಟಾಪ್‌, ಮೊಬೈಲ್‌, ಐಪಾಡ್‌ ಗಳನ್ನು ರೂಮ್‌ ನಲ್ಲಿ ಇಟ್ಟು ಬಾಗಿಲು ಹಾಕದೇ ನಿರ್ಲಕ್ಷವಹಿಸುತ್ತಿದ್ದು ಆರೋಪಿಗಳು ಇದನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗರೂಕತೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.

Comments are closed.