ಕುಂದಾಪುರ: ಚಕ್ರೇಶ್ವರಿ ಯುವಕ ಮಂಡಲ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಇವರ ಆಶ್ರಯದಲ್ಲಿ ಮುದ್ದು ರಾಧಾ ಮುದ್ದು ಕೃಷ್ಣ ಸ್ಪರ್ಧೆಯನ್ನು ಭಾನುವಾರ ಕೋಡಿ ಸಬಾಭವನದಲ್ಲಿ ಆಯೋಜಿಸಲಾಗಿತ್ತು.
ಚಕ್ರೇಶ್ವರಿ ದೇವಸ್ಥಾನದ ಪಾತ್ರಿಗಳಾದ ರಾಘವೇಂದ್ರ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. 3 ವರ್ಷದ ಒಳಗಿನ ವಿಭಾಗದಲ್ಲಿ ಹಂಸಿನಿ, ದೈವಿಕ್ ಸೇರೇಗಾರ್, ಆರ್ನ ಬಿ ನಾಯಕ್. 3ರಿಂದ 6 ವರ್ಷದ ವಿಭಾಗದಲ್ಲಿ ಶ್ರೇಯ, ಧ್ವನಿ ಕಿರಣ್, ಅಹನಾ ಸಿ. ಪಿ. 6ರಿಂದ 9ವರ್ಷದ ವಿಭಾಗದಲ್ಲಿ ನಿಸರ್ವಿ, ಶ್ರಾವಣ್ಯ ಎಸ್ ಪೂಜಾರಿ, ಆರಾಧ್ಯ ಕೋಡಿ ಬಹುಮಾನ ಪಡೆದರು.
ಓಕುಡ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಮಲ್ಲಿಕಾ ಶೇರೇಗಾರ್, ವಿಜೇತಾ ಪೂಜಾರಿ, ಶ್ವೇತಾ ನಾಯಕ್ ತೀರ್ಪುಗಾರರಾಗಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ವಹಿಸಿದ್ದರು. ಸಭೆಯಲ್ಲಿ ಕೋಡಿ ಗಂಗಾಧರ್ ಪೂಜಾರಿ, ಜಯಪ್ರಕಾಶ್ ಪೂಜಾರಿ, ಅಶೋಕ್ ಜಿ.ಪೂಜಾರಿ, ಗೋಪಾಲ್ ಪೂಜಾರಿ, ಸಂಜೀವ್ ಆರ್. ಪೂಜಾರಿ, ನಾಗರಾಜ್ ಕಾಂಚನ್, ಗೋವಿಂದ ಕಾಂಚನ್, ತಿಮ್ಮಪ್ಪ ಖಾರ್ವಿ, ನಾರಾಯಣ ಖಾರ್ವಿ,ಸುರೇಖಾ ಮಧುಕರ್ ಪೂಜಾರಿ, ಕಮಲಾ ಮಂಜುನಾಥ್, ರವಿಕಲಾ ಗಣೇಶ್ ಶೇರೇಗಾರ್, ಉಪಸ್ಥಿತರಿದ್ದರು.
ಕೋಡಿ ಆನಂದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ ಕೋಡಿ ಯೋಗೀಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು.
Comments are closed.