ಕುಂದಾಪುರ: ಉಸಿರು ಬಿಟ್ಟು ಹೋಗುವಾಗ ಹೆಸರು ಬಿಟ್ಟು ಹೋಗಬೇಕೆನ್ನುವಂತೆ ಅಮೇರಿಕಾ ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಂಶೋಧನೆಯ ವಿಶ್ವವಿದ್ಯಾಲಯ ನನ್ನನ್ನ ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದ್ದು ಹೃದಯ ತುಂಬಿ ಬಂದಿದೆ. ನಾನೇನು ಹಣ ಸಂಪಾದಿಸಿಲ್ಲ ಬದಲಿಗೆ ಜನರ ಪ್ರೀತಿ ವಿಶ್ವಾಸವನ್ನ ಗಳಿಸಿದ್ದೇನೆ ಎಂಬುವುದಕ್ಕೆ ಈ ಗೌರವ ಡಾಕ್ಟರೇಟ್ ಹಾಗೂ ಕರ್ನಾಟಕ ಸೌರಭ ಪ್ರಶಸ್ತಿ ಸಾಕ್ಷಿ. ಜನ ನನ್ನನ್ನ ಗುರುತಿಸಿದ್ದಾರೆ. ರಾಜ್ಯದ ಉದ್ದಗಲ ಪ್ರವಾಸ ಮಾಡಿದ್ದೇನೆ. ಜನರ ನಾಡಿ ಮಿಡಿತವನ್ನ ಅರಿತಿದ್ದೇನೆ. ಇನ್ನಷ್ಟು ಸಾಮಾಜಿಕ ಸೇವೆ ಸಲ್ಲಿಸಲು ಈ ಡಾಕ್ಟರೇಟ್ ನನಗೆ ಪ್ರೇರಣೆ ಎಂದು ಡಾ.ಉದಯ್ ಕುಮಾರ್ ತಲ್ಲೂರು ಅವರು ಹೇಳಿದರು.
ತಾಲೂಕಿನ ತಲ್ಲೂರು ಶೇಷಕೃಷ್ಣ ಕನ್‌ವೆನ್‌ಶನ್ ಹಾಲ್‌ನಲ್ಲಿ ತಲ್ಲೂರು ಕೋಟೆಬಾಗಿಲಿನ ಸಾರ್ವಜನಿಕರು ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಕಾರ್ಯಕ್ರಮದ ಸಂಘಟಕರು ಡಾ.ಉದಯ್ ಕುಮಾರ್ ತಲ್ಲೂರುರವರ ಹುಟ್ಟು ಹಬ್ಬವನ್ನ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಆಚರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಲ್ಲೂರು ಗ್ರಾಮ ಪಂಚಾಯತ್‌ನ ಸದಸ್ಯರುಗಳಾದ ರಾಧಾಕೃಷ್ಣ ಶೇರುಗಾರ್ ಉಪ್ಪಿನಕುದ್ರು, ಸಂಜೀವ ದೇವಾಡಿಗ, ಅಕ್ಷಯ್ ಕೋಟೆಬಾಗಿಲು,ಕೃಷ್ಣ ಪೂಜಾರಿ ಹಾಗೂ ದಲಿತ ಹೋರಾಟಗಾರ ಯು.ನಾರಾಯಣ್ ಉಪ್ಪಿನಕುದ್ರು, ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಬೈಂದೂರು ಸಂಚಾಲಕ ಸಂದೇಶ್ ನಾಡಾ, ತಲ್ಲೂರಿನ ಮಾಜಿ ಗ್ರಾಮ ಪಂ ಸದಸ್ಯರಾದ ವೆಂಕಟ ಉಪ್ಪಿನಕುದ್ರು, ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಸಬ್ಲಾಡಿ, ಹಾಗೂ ಉಮೇಶ್ ಎಸ್.ಕೆ ಕೋಟೆಬಾಗಿಲು, ಮಂಜುನಾಥ್ ಕೋಟೆಬಾಗಿಲು,ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ವಿಜಯ್ ಕೆ.ಎಸ್, ಯೋಗೀಶ್ ಕೋಟೆಬಾಗಿಲು, ರಮೇಶ್ ಕೋಟೆಬಾಗಿಲು,ಉಪಸ್ಥಿತರಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ)ಯ ತಾಲೂಕು ಸಂಚಾಲಕ ಮಂಜುನಾಥ್ ಗುಡ್ಡೆಯಂಗಡಿ ಕಾರ್ಯಕ್ರಮವನ್ನ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮವನ್ನು ಅರುಣ್ ಉಪ್ಪಿನಕುದ್ರು ನಿರೂಪಿಸಿ ವಂದಿಸಿದರು.
Comments are closed.