ಕರಾವಳಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ; ಕುಂಭಾಶಿಯಿಂದ ಹೆಮ್ಮಾಡಿಯವರೆಗೆ ಸಂಚಾರ ದುಸ್ತರ: ಒನ್’ವೇ ಮಾಡಿದ ಪೊಲೀಸರು!

Pinterest LinkedIn Tumblr

ಕುಂದಾಪುರ: ಉಡುಪಿಯಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಎನ್ನಲಾದ ಘನವಾಹನದಲ್ಲಿದ್ದ ಆಯಿಲ್ ಮಾದರಿ ವಸ್ತು ಸೋರಿಕೆಯಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದ ಘಟನೆ ಶನಿವಾರ ಬೆಳಿಗ್ಗೆನಿಂದ ವರದಿಯಾಗಿದೆ.

ಜಿಲ್ಲೆಯ ಕುಂಭಾಶಿಯಿಂದ ಮೊದಲ್ಘೊಂಡು ಹೆಮ್ಮಾಡಿ ತನಕ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದ್ದು ಬೆಳಿಗ್ಗೆ ಸಣ್ಣ ಪ್ರಮಾಣದ ಮಳೆ ಬಂದ ಕಾರಣ ಮಳೆ‌ನೀರಿನೊಂದಿಗೆ ಆಯಿಲ್ ಮಿಶ್ರ ಗೊಂಡು ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರು ಬೀಳುವಂತಾಗಿದ್ದಲ್ಲದೆ ಕಾರು ಮೊದಲಾದ ಲಘು ವಾಹನಗಳು ಬ್ರೇಕ್ ಹಿಡಿಯದೆ ಸಣ್ಣ ಪುಟ್ಟ ಅವಘಡಗಳು ನಡೆದಿದೆ.

ಘಟನೆ ಬೆಳಕಿಗೆ ಬರುತ್ತಲೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಉಡುಪಿ-ಬೈಂದೂರು ಮಾರ್ಗದ ಒಂದು ಕಡೆ ರಸ್ತೆಯನ್ನು ಬಂದ್ ಮಾಡುವ ಮೂಲಕ ಏಕಮುಖ ಸಂಚಾರಕ್ಕೆ ಅನುವು ಮಾಡಿದ್ದು ಟ್ಯಾಂಕರ್ ಪತ್ತೆಗೆ ಮುಂದಾಗಿದ್ದಾರೆ.

ಟ್ರಾಫಿಕ್ ಠಾಣೆ ಪಿಎಸ್ಐ ಪ್ರಸಾದ್ ಕುಮಾರ್, ಸುದರ್ಶನ್ ಹಾಗೂ ಸಿಬ್ಬಂದಿಗಳು ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಸಿ ಅಗತ್ಯ ಕ್ರಮಕೈಗೊಂಡಿದ್ದಾರೆ.

Comments are closed.