ಕರಾವಳಿ

ಉಡುಪಿ ಪೊಲೀಸ್‌ ವೈರ್‌ಲೆಸ್ ವಿಭಾಗದ ಸಬ್ ಇನ್ಸ್‌ಪೆಕ್ಟರ್ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ಮೃತ್ಯು

Pinterest LinkedIn Tumblr

ಉಡುಪಿ: ಉಡುಪಿ ಪೊಲೀಸ್‌ ವೈರ್‌ಲೆಸ್ ವಿಭಾಗದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಿತ್ಯಾನಂದ ಶೆಟ್ಟಿ (52) ಅವರು ಸೆ.17 ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲಾ ಪೊಲೀಸ್‌ನ ವೈರ್‌ಲೆಸ್ ವಿಭಾಗದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಅವರು ಮಲ್ಪೆಯ ಕರಾವಳಿ ಭದ್ರತಾ ಪೊಲೀಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯಾನಂದ ಶೆಟ್ಟಿ ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಪಾಳಿ ಮುಗಿಸಿ ಮನೆಗೆ ಮರಳಿದ್ದರು ಎನ್ನಲಾಗಿದೆ.

Comments are closed.