ಕರಾವಳಿ

ಕುಂದಾಪುರ-ಬೈಂದೂರು ತಾಲೂಕಿನಲ್ಲಿ ವ್ಯಾಪಕ ಮಳೆ: ಹೆದ್ದಾರಿಯಲ್ಲಿ ಕೃತಕ ಕೆರೆ..!

Pinterest LinkedIn Tumblr

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಸೋಮವಾರ ಸಂಜೆ ಆರಂಭವಾಗಿ ರಾತ್ರಿಯಿಡೀ ಮಳೆ ಬಿರುಸುಗೊಂಡಿದ್ದು ಮಂಗಳವಾರ ಬೆಳಿಗ್ಗೆನಿಂದ ಮಧ್ಯಾಹ್ನದವರೆಗೂ ಮುಂದುವರೆದಿದೆ.

ಬೆಳಿಗ್ಗೆನಿಂದಲೇ ಮೋಡ ಕವಿದ ವಾತಾವರಣ ಸಹಿತ ವ್ಯಾಪಕ ಮಳೆಯಾಗಿದ್ದು ಉಭಯ ತಾಲೂಕಿನಲ್ಲಿ ಒಂದೆರಡು ವಾರಗಳ ನಂತರ ಈ ರೀತಿಯ ಮಳೆ ಸುರಿದಿದೆ.

ಹೆದ್ದಾರಿಯಲ್ಲಿ ಕೃತಕ ಕೆರೆ: ಇನ್ನು ವ್ಯಾಪಕ ಮಳೆಯಿಂದಾಗಿ ಕೋಟೇಶ್ವರ, ತೆಕ್ಕಟ್ಟೆ, ಕೋಟ, ಕುಂದಾಪುರ ಸರ್ವೀಸ್ ರೋಡಿನ ಟಿಟಿ ರಸ್ತೆಯ ಎರಡೂ ಭಾಗದಲ್ಲಿ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾಗಿದ್ದು ಇದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಾಹ್ನದ ವೇಳೆ ಎಡಬಿಡದೆ ಮಳೆ ಸುರಿಯುತ್ತಿದೆ.

Comments are closed.