ಕುಂದಾಪುರ: ಕೊರಗ ಸಮುದಾಯದ ಕುಲಕಸುಬಾದ ಬುಟ್ಟಿ ನೇಯ್ಗೆಯಲ್ಲಿ ಹೊಸ ವಿನ್ಯಾಸವನ್ನು ಎಲ್ಲರಿಗೂ ಪರಿಚಯಿಸಿ ಅನೇಕ ಯುವಕ ಯುವತಿಯರಿಗೆ ತರಬೇತಿಯನ್ನು ನೀಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬು ಜಪ್ತಿ (62) ಇವರು ಅ. 3 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪುತ್ರಿ, ಪುತ್ರನನ್ನು ಅಗಲಿದ್ದಾರೆ.
ಕಳೆದ ಹಲವು ದಶಕಗಳಿಂದ ಬುಟ್ಟಿ ತಯಾರಿಕೆ ಬಗ್ಗೆ ವಿಶೇಷ ಆಸಕ್ತಿಹೊಂದಿದ್ದ ಇವರು ಕುಲಕಸುಬು ಉಳಿಸಿ ಬೆಳೆಸಲು ಉತ್ಸಾಹ ಹೊಂದಿದ್ದರು. ಕುಂಭಾಶಿ ಮಕ್ಕಳಮನೆಯಲ್ಲಿ ನಡೆದ ಬುಟ್ಟಿ ನೇಯುವಿಕೆ ಶಿಬಿರ, ಕಳೆದ ವರ್ಷ ಪಡುಕೋಣೆಯಲ್ಲಿ ಒಂದು ತಿಂಗಳು ನಡೆದ ಶಿಬಿರ ಸಹಿತ ವಿವಿದೆಡೆ ಸಂಪನ್ಮೂಲ ವ್ಯಕ್ತಿಯಾಗಿ ತೊಡಗಿಸಿಕೊಂಡಿದ್ದರು. ಹಲವು ಸಂಘ ಸಂಸ್ಥೆಗಳ ಕೋರಿಕೆಯಂತೆ ಬಿದಿರು ಹಾಗೂ ಬೀಳಿನಿಂದ ತರಹೇವಾರಿ ಗೃಹೋಪಯೋಗಿ ವಸ್ತುಗಳನ್ನು ನಿರ್ಮಿಸಿಕೊಟ್ಟು ಜೀವನ ಸಾಗಿಸುತ್ತಿದ್ದರು.
Comments are closed.