ಉಡುಪಿ: ಮಣಿಪಾಲ ಸಮೀಪದಲ್ಲಿ ಹೋಟೆಲ್ ಕಾರ್ಮಿಕನ ಕುತ್ತಿಗೆ ಚುಚ್ಚಿ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಡಿ.6 ಶುಕ್ರವಾರ ಉಡುಪಿ ಜಿಲ್ಲಾಧ್ಯಂತ ಬಾರೀ ಸುದ್ದಿಯಾಗಿದ್ದು ಪ್ರಕರಣ ಬೆನ್ನತ್ತಿ ಹೊರಟ ಪೊಲೀಸರ ತನಿಖೆ ವೇಳೆ ಸತ್ಯಾಂಶ ಬಯಲಾಗಿದೆ.
ಘಟನೆ ವಿವರ: ಡಿ.6ರಂದು ಬೆಳಿಗ್ಗೆ 7:15 ಗಂಟೆಯಿಂದ ಬೆಳಿಗ್ಗೆ 08:00 ಗಂಟೆಯ ನಡುವಿನ ಅವಧಿಯಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿ.ಪಿ ನಗರ ಅನಂತ ಕಲ್ಯಾಣ ನಗರ ಕ್ರಾಸ್ ನ ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿ ಪೂರ್ವ ದ್ವೇಷದಿಂದ ಶ್ರೀಧರ (38) ಎಂಬವರಿಗೆ ಯಾವುದೋ ಹರಿತವಾದ ಆಯುಧದಿಂದ ಕುತ್ತಿಗೆಗೆ ಚುಚ್ಚಿ ಹಲ್ಲೆ ಮಾಡಿ ಕೊಲೆ ಮಾಡಿರಬಹುದಾಗಿದೆ ಎಂಬ ಬಂದ ದೂರಿನಂತೆ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ಪೊಲೀಸರು ತನಿಖೆ ಸಂದರ್ಭದಲ್ಲಿ ಕೊಲೆ ನಡೆದ ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲಿಸಿದ್ದು ಮೃತ ವ್ಯಕ್ತಿಯು ಬಿಯರ್ ಬಾಟಲಿಯಿಂದ ತಾನೇ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ. ಶವ ಪರೀಕ್ಷೆ ಮತ್ತು ಸಾಕ್ಷಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.