ಕರಾವಳಿ

ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರ ಆಯ್ಕೆ

Pinterest LinkedIn Tumblr

(ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಉಪ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ.

ನೂತನ ಸಮಿತಿ:
ಅರ್ಚಕರಾದ ಸತ್ಯನಾರಾಯಣ ಪುರಾಣಿಕ, ಪ್ರವರ್ಗ ಪ .ಜಾತಿ/ಪ. ಪಂಗಡದಿಂದ ಸುಧೀರ, ಮಹಿಳಾ ಪ್ರವರ್ಗದಿಂದ ಅಕ್ಷತಾ ಎನ್. ಶೆಟ್ಟಿ, ಸಾಮಾನ್ಯ ಪ್ರವರ್ಗದಿಂದ ರಾಜೀವಿ, ಎ. ಚಂದ್ರಶೇಖರ್ ಅಸೋಡು, ಅಜಿತ್ ಕುಮಾರ್ ಶೆಟ್ಟಿ ಅಸೋಡು, ಕೆ. ರತ್ನಾಕರ ಶೆಟ್ಟಿ ಕಾಳಾವರ, ಕೆ. ರಂಜಿತ್ ಕುಮಾರ್ ಶೆಟ್ಟಿ ಸಳ್ವಾಡಿ-ಕಾಳಾವರ, ಸುಧಾಕರ ಶೆಟ್ಟಿ ಕಾಳಾವರ.

ದೇವಾಲಯದ ಅಭಿವೃದ್ಧಿಗೆ ಇರುವ ಆಸಕ್ತಿಯನ್ನು ಪರಿಗಣಿಸಿ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಪರಿಶೀಲಿಸಿ ಮತ್ತು ಚರ್ಚಿಸಿ ದೇವಾಲಯದ ಸುವ್ಯವಸ್ಥಿತ ಆಡಳಿತದ ಹಿತದೃಷ್ಟಿ ಹಾಗೂ ಸ್ಥಳೀಯ ಅವಶ್ಯಕತೆಗಳನ್ನು ಪರಿಶೀಲಿಸಿ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಮೇಲ್ಕಂಡ ಸದಸ್ಯರು ತಮ್ಮ ಪ್ರಥಮ ಸಭೆಯಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕಛೇರಿಗೆ ನಡವಳಿಯನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.

 

 

 

 

Comments are closed.