ಕರಾವಳಿ

ಕುಂದಾಪುರದ ಕೋಡಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಸಹೋದರರು; ಇಬ್ಬರು ನೀರುಪಾಲು, ಓರ್ವನ ರಕ್ಷಣೆ

Pinterest LinkedIn Tumblr

ಕುಂದಾಪುರ: ಕೋಡಿ ಬೀಚ್ ನಲ್ಲಿ ಸ್ನಾನಕ್ಕೆ ಇಳಿದು ಮೂವರು ಸಹೋದರರು ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನನ್ನು ರಕ್ಷಿಸಿದ ಘಟನೆ ಡಿ.7 ರಂದು ಶನಿವಾರ ಸಂಜೆ ಕುಂದಾಪುರ ತಾಲೂಕಿನ ಕೋಡಿ ಬೀಚ್ ನಲ್ಲಿ ಸಂಭವಿಸಿದೆ.

ಅಂಪಾರು ಗ್ರಾಮದ ಮೂಡುಬಗೆ ದಾಮೋದರ ಪ್ರಭು ಹಾಗೂ ಚಿತ್ರಕಲಾ ಪ್ರಭು ದಂಪತಿಯ ಪುತ್ರರಾದ ಧನರಾಜ್ (23), ದರ್ಶನ್ (18) ಮೃತರು. ಇದೇ ವೇಳೆ ಸಮುದ್ರದ ಅಲೆಗಳಿ‌ಂದ ಧನುಷ್(20) ಎನ್ನುವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಧನರಾಜ್ ಖಾಸಗಿ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದು ವರ್ಕ್ ಪ್ರಮ್ ಹೋಂನಲ್ಲಿದ್ದರು. ದರ್ಶನ್ ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದರು. ಕಷ್ಟ ಜೀವನದ ನಡುವೆಯೂ ಮೂವರು ಮಕ್ಕಳಿಗೂ ಪೋಷಕರು ಉತ್ತಮ ಶಿಕ್ಷಣ ನೀಡಲು ಸಾಕಷ್ಟು ಶ್ರಮಿಸಿದ್ದರು ಎನ್ನಲಾಗಿದೆ.

ಶನಿವಾರ ಸಂಜೆ ಇವರೆಲ್ಲರು ಕೋಡಿ ಬೀಚ್ ಗೆ ಬಂದಿದ್ದು ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಸಂದರ್ಭ ಕಡಲ ಅಲೆಗೆ ಈ ಮೂವರು ಸಹೋದರರು ಕೊಚ್ಚಿ ಹೋಗಿದ್ದು ತಕ್ಷಣ ಸ್ಥಳೀಯರು ಧನುಷ್ ಎನ್ನುವರನ್ನು ರಕ್ಷಿಸಿದ್ದಾರೆ. ಧನರಾಜ್ ಸ್ಥಳದಲ್ಲೆ ಮೃತಪಟ್ಟಿದ್ದು, ನೀರುಪಾಲದ ದರ್ಶನ್ ಮೃತದೇಹ ಕೊಂಚ ಸಮಯದ ಬಳಿಕ ಪತ್ತೆಯಾಗಿದೆ.

ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

 

Comments are closed.