ಉಡುಪಿ: ಉಡುಪಿ ಯಿಂದ ಹೆಜಮಾಡಿ ಟೋಲ್‌ಗೇಟ್‌ನತ್ತ ಬಂದಿದ್ದ ಎಸ್‌ಡಿಪಿಐ ನಾಯಕ ರಿಯಾಜ್ ಕಡುಂಬು ಹಾಗೂ ಮತ್ತಿತರರು ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಅವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಜಾಥಾವನ್ನು “ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾ ಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ – 2′ ಎಂಬುದಾಗಿ ಸಂಘಟಿಸಲಾಗಿತ್ತು.
ಈ ಕುರಿತಾದ ಅನುಮತಿಯನ್ನು ಪಡೆಯಲಾಗಿದೆಯೇ ಎಂದು ಹೆಜಮಾಡಿಗೆ ಆಗಮಿಸಿದ್ದ ಜಾಥಾದ ನಾಯಕ ರಿಯಾಜ್ ಕಡುಂಬು ಅವರಲ್ಲಿ ಠಾಣೆಯ ಪಿಎಸ್‌ಐ ಪ್ರಸನ್ನ ಪ್ರಶ್ನಿಸಿದ್ದರು. ಆಗ ಅನುಮತಿ ಪಡೆದಿಲ್ಲ ಎನ್ನುವುದನ್ನು ಎಸ್‌ಡಿಪಿಐ ನಾಯಕರು ಪೊಲೀಸರಿಗೆ ತಿಳಿಸಿದ್ದರು.
ಅನುಮತಿ ಇಲ್ಲದ ಜಾಥಾದಲ್ಲಿ ಕಾರು ಬೈಕ್‌ಗಳಲ್ಲಿನ 75–100 ಜನರ ಅಕ್ರಮ ಗುಂಪು ಹೆದ್ದಾರಿ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ. ಇದು ಸರಿಯಲ್ಲ ಎಂದು ಪ್ರಸನ್ನ ಅವರು ವಿವರಿಸಿದ್ದರು ಎಂದು ತಿಳಿಸಲಾಗಿದೆ.
ಆದರೂ ಅದಕ್ಕೆ ಕಿವಿಗೊಡದೆ ಘೋಷಣೆ ಕೂಗುತ್ತಾ ಮೂಲ್ಕಿಯತ್ತ ಜಾಥಾವನ್ನು ಮುಂದುವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Comments are closed.