ಕುಂದಾಪುರ: ಕೇರಳ ಮೂಲದ ಮೊಹಮ್ಮದ್ ಮುನ್ಸಿರ್ ಅವರ ಬೆಲೆ ಬಾಳುವ ಐಫೋನ್ ರೈಲಿನಲ್ಲಿ ಕಳವಾಗಿದೆ.
(ಸಾಂದರ್ಭಿಕ ಚಿತ್ರ)
ಅವರು ಗಂಗಾನಗರ-ಕೊಚ್ಚುವೇಲಿ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದ ಜನರಲ್ ಕೋಚ್‌ನಲ್ಲಿ ಮಡಗಾಂವ್‌ನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಕಳ್ಳತನ ಕೃತ್ಯ ನಡೆದಿದೆ.
ರೈಲು ಕುಂದಾಪುರಕ್ಕೆ ತಲುಪಿದಾಗ 1.50 ಲಕ್ಷ ರೂ.ಗಳ ಐಫೋನ್ 16 ಪ್ರೊ ಮೊಬೈಲ್ ಕಳವಾಗಿರುವುದು ಗಮನಕ್ಕೆ ಬಂತು. ಮುನ್ಸಿರ್ ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದನ್ನು ಕುಂದಾಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
Comments are closed.