ಕರಾವಳಿ

ಹೊಸವರ್ಷದ ಪಾರ್ಟಿಗೆ ತರಿಸಿದ್ದ ಡ್ರಗ್ಸ್‌: ಎಂಡಿಎಂಎ, ಗಾಂಜಾ ಸಹಿತ ಮೂವರನ್ನು ಬಂಧಿಸಿದ ಮಂಗಳೂರು ಪೊಲೀಸರು!

Pinterest LinkedIn Tumblr

ಮಂಗಳೂರು: ಹೊಸ ವರ್ಷದ ಆಚರಣೆಗೆಂದು ತರಲಾಗಿದ್ದ ಡ್ರಗ್ಸ್‌ ಅನ್ನು ಬುಧವಾರ ಕಾವೂರು ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.

ಉಡುಪಿ ಉದ್ಯಾವರ ಸಂಪಿಗೆನಗರದ ದೇವರಾಜ್‌(37), ಕಿನ್ನಿಮೂಲ್ಕಿ ರಾಮಚಂದ್ರ ಲೇನ್‌ನ ಮೊಹಮ್ಮದ್‌ ಫ‌ರ್ವೆಜ್‌ ಉಮರ್‌ (25) ಮತ್ತು ಉಡುಪಿ ಬ್ರಹ್ಮಗಿರಿಯ ಶೇಖ್‌ ತಹೀಂ (20) ಬಂಧಿತರು.

ಆರೋಪಿಗಳು ಕೂಳೂರು ನದಿ ದಂಡೆಯಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾರಾಟಕ್ಕೆಂದು ತಂದಿದ್ದ 5 ಕೆ.ಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೊಕೇನ್‌, 17 ಗ್ರಾಂ ತೂಕದ 35 ಎಂಡಿಎಂಎ ಪಿಲ್ಸ್‌, 100 ಗ್ರಾಂ ಚರಸ್‌, 8 ಗ್ರಾಂ ಹೈಡ್ರೋವಿಡ್‌ ಗಾಂಜಾ, 3 ಎಲ್‌ಎಸ್‌ಡಿ ಸ್ಟ್ರಿಪ್‌ಗ್ಳು ಸಹಿತ ಒಟ್ಟು 9 ಲ. ರೂ. ಮೌಲ್ಯದ ಡ್ರಗ್ಸ್‌ ಹಾಗೂ ಹ್ಯುಂಡೈ ಐ 10 ಕಾರು ಮತ್ತು ಸ್ಕೂಟರ್‌ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಪರ್ವೇಜ್‌ ಉಡುಪಿ ಜಿಲ್ಲೆಯಲ್ಲಿ ಒಟ್ಟು 3 ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ನಿರ್ದೇಶನದಂತೆ ಪೊಲೀಸ್ ಉಪ-ಆಯುಕ್ತರು(ಕಾ.ಸು) ಸಿದ್ದಾರ್ಥ ಗೋಯೆಲ್, ಮತ್ತು ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ರವಿಶಂಕರ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ನೇತೃತ್ವದ ಡ್ರಗ್ಸ್ ತಂಡ ಮತ್ತು ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ, ಡ್ರಗ್ಸ್ ತಂಡದ ಸಿಬ್ಬಂದಿಗಳಾದ ಸುನೀಲ್, ಬಸವಾರಜ, ಅಶೋಕ, ಹಾಲೇಶ್, ಆನಂದ ಹಾಗೂ ಕಾವೂರು ಪೊಲೀಸ್ ಪ್ರವೀಣ, ನಾಗರಾಜ, ಸುನಿಲ್, ಕಲ್ಲಪ್ಪ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.

Comments are closed.