ಕರ್ನಾಟಕ

ಸಿ.ಟಿ.ರವಿಗೆ ಷರತ್ತು ವಿಧಿಸಿ ಬಿಡುಗಡೆ ಆದೇಶ ನೀಡಿದ ಕರ್ನಾಟಕ ಹೈಕೋರ್ಟ್

Pinterest LinkedIn Tumblr

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸಿ.ಟಿ.ರವಿ ಅವರನ್ನು ತತ್ ಕ್ಷಣ ಬಿಡುಗಡೆ ಮಾಡಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ಸಂಜೆ (ಡಿ.20) ರಂದು ಆದೇಶ ಮಾಡಿದೆ.

ಈ ಪ್ರಕರಣದ ಆರೋಪಿ ಸಿ.ಟಿ.ರವಿ ಅವರು ತನಿಖೆಗೆ ಸಹಕರಿಸಬೇಕು, ತನಿಖಾಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿ ಹೈಕೋರ್ಟ್ ಆದೇಶ ನೀಡಿದೆ.

ಗುರುವಾರ ರಾತ್ರಿಯಿಂದ ಪೊಲೀಸರ ವಶದಲ್ಲಿರುವ ಸಿ.ಟಿ.ರವಿ ಅವರಿಗೆ ಹೈಕೋರ್ಟ್ ಆದೇಶದಿಂದ ರಿಲೀಫ್ ಸಿಕ್ಕಂತಾಗಿದೆ. ಪೊಲೀಸರು ಸಿ.ಟಿ.ರವಿ ಅವರನ್ನು ಬೆಳಗಾವಿಯಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಕರೆ ತರುತ್ತಿದ್ದಾಗ ಈ ಆದೇಶ ಸಿಕ್ಕಿದೆ.

ಇನ್ನೊಂದೆಡೆ, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿ.ಟಿ.ರವಿ ಅವರ ಪರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಾಳೆಗೆ(ಶನಿವಾರ) ಮುಂದೂಡಲಾಗಿತ್ತು.

 

Comments are closed.