ಮಡಿಕೇರಿ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಡಿ.24ರಂದು ಸಂಜೆ ಸೇನಾ ವಾಹನ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ ಕೊಡಗಿನ ಯೋಧ ದಿವಿನ್ (28) ಅವರು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ರವಿವಾರ ಕೊನೆಯುಸಿರೆಳೆದರು.
ಇವರು ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ದಿ| ಪ್ರಕಾಶ್-ಜಯ ದಂಪತಿಯ ಪುತ್ರ.
ತಾಯಿ ಜಯ ಅವರು ಗುರುವಾರ ಸಂಜೆ ಶ್ರೀನಗರಕ್ಕೆ ತೆರಳಿದ್ದರು.
ದಿವಿನ್ ತಾಯಿಗೆ ಆಸರೆಯಾಗಿದ್ದು, 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. 2025ರ ಫೆಬ್ರವರಿಯಲ್ಲಿ ಇವರ ವಿವಾಹ ನಡೆಯಲಿತ್ತು. ಸೋಮವಾರ ಅಥವಾ ಮಂಗಳವಾರ ಪಾರ್ಥಿವ ಶರೀರ ಕೊಡಗಿಗೆ ಬರುವ ಸಾಧ್ಯತೆ ಇದೆ. ಮಡಿಕೇರಿ ಶಾಸಕ ಡಾ| ಮಂಥರ್ ಗೌಡ ಅವರು ದಿವಿನ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
Comments are closed.