ಕರಾವಳಿ

ಹೊಸ ವರ್ಷದ ಶುಭಾಶಯ ಕೋರುವ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳ ಬಗ್ಗೆ ಎಚ್ಚರವಹಿಸಿ: ಉಡುಪಿ ಸೆನ್ ಪೊಲೀಸರ ಮಾಹಿತಿ

Pinterest LinkedIn Tumblr

ಉಡುಪಿ: 2025 ನೇ ಹೊಸವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತ್ತು ಎಪಿಕೆ (Apk) ಫೈಲ್‌ಗಳನ್ನು ಕಳುಹಿಸಿ ಹ್ಯಾಕ್ ಮಾಡುವ ಸಾಧ್ಯತೆ ಇದೆ. ನಂತರ ಹ್ಯಾಕ್ ಮಾಡಿದ ಮೊಬೈಲ್ ಮೂಲಕ ಸಾರ್ವಜನಿಕ ಜಾಲತಾಣಗಳನ್ನು ಬಳಸಿ ಹಾನಿಕಾರ ಲಿಂಕ್ ಹಾಗೂ Apk ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್‌ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ ಎಂದು ಉಡುಪಿ ಸೆನ್ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ತಮಗೆ ಬರುವ ಈ ರೀತಿಯ ಲಿಂಕ್ ‌ಗಳು ಹಾಗೂ Apk ಫೈಲ್‌ಗಳು ಹೊಸವರ್ಷದ ಶುಭಾಶಯಗಳ ಲಿಂಕ್ ಜೊತೆಗೆ ಸ್ವೀಕರಿಸಿಕೊಂಡಲ್ಲಿ ಅವುಗಳನ್ನು ತಕ್ಷಣ ಡಿಲೀಟ್ ಮಾಡಿರಿ. ಹಾಗೂ ಯಾವುದೇ ಕಾರಣಕ್ಕೂ ಸದ್ರಿ ಹಾನಿಕಾರಕ ಲಿಂಕ್‌ಗಳನ್ನು ಹಾಗೂ Apk ಫೈಲ್‌ಗಳನ್ನು ಯಾರೊಬ್ಬರಿಗೂ ಶೇರ್ ಮಾಡದಿರಿ.

ಹಾನಿಕಾರಕ ಲಿಂಕ್ ಮತ್ತು Apk ಫೈಲ್‌ಗಳನ್ನು ಯಾವುದಾದರೂ ವಾಟ್ಸಾಪ್ ಗ್ರೂಪ್‌ಗಳಿಗೆ ನಿಮ್ಮ ಪರಿಚಿತ ವಾಟ್ಸಾಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದಲ್ಲಿ ಆ ಗ್ರೂಪಿನ ಅಡ್ಮಿನ್ ‌ಗಳು ಅಂತಹ ಸಂದೇಶಗಳನ್ನು ಪರೀಶೀಲನೆ ಮಾಡಿ ಡಿಲೀಟ್ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.

ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಕ್ಕೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್‌ಸೈಟ್‌ನಲ್ಲಿ ದೂರುದಾಖಲಿಸಲು ಉಡುಪಿ ಸೆನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments are closed.