ಕುಂದಾಪುರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಕಣಿವೆಗೆ ಉರುಳಿದ ಅಪಘಾತದಲ್ಲಿ ಮೃತಪಟ್ಟ ಬೀಜಾಡಿಯ ಯೋಧ ಅನೂಪ್ ಪೂಜಾರಿ ಇವರ ನಿವಾಸಕ್ಕೆ ಗುರುವಾರ ನಾಡೋಜ ಡಾ.ಜಿ.ಶಂಕರ್ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಪತ್ನಿ ಮಂಜುಶ್ರೀಗೆ 1 ಲಕ್ಷ ಹಾಗೂ ತಾಯಿ ಚಂದು ಪೂಜಾರಿ ಇವರಿಗೆ 50 ಸಾವಿರ ಹಣದ ಚೆಕ್ ವಿತರಿಸಿ ಮಾತನಾಡಿದ ನಾಡೋಜ ಡಾ.ಜಿ.ಶಂಕರ್, ದೇವರು ಹಣೆ ಬರಹ ಬರೆದ ಹಾಗೆ ನಮ್ಮ ಜೀವನ ನಡೆಯುತ್ತದೆ. ಯಾವುದೇ ಕಷ್ಟ ಹಾಗೂ ಸಂಕಷ್ಟ ಬಂದಾಗ ಹೆದರಿ ಕೈ ಕಟ್ಟಿ ಕುಳಿತುಕೊಳ್ಳಬಾರದು. ಅನೂಪ್ ಮಾಡಿದ ದೇಶ ಸೇವೆಯ ಮುಂದೆ ನಮ್ಮದೆನಿಲ್ಲ. ಅನೂಪ್ ಮಾಡಿದ ಹೆಸರಿನಲ್ಲಿಯೇ ನಮ್ಮ ಬದುಕು ಶಾಶ್ವತವಾಗಿ ನಡೆಯುತ್ತದೆ ಎಂದು ತಿಳಿದು ಧೈರ್ಯದಿಂದ ಮುನ್ನುಗ್ಗಬೇಕು. ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ನಿರಂತರವಾಗಿ ನಿಮ್ಮ ಹಿಂದೆ ಇರಲಿದೆ ಎಂದರು.
ಡಾ.ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ದಯಾನಂದ್, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ್ ಕುಂದರ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷರಾದ ಜಯಂತ್ ಅಮೀನ್, ಮಾಜಿ ಅಧ್ಯಕ್ಷರಾದ ಸತೀಶ್ ಎಮ್ ನಾಯ್ಕ್, ವಿನಯ ಕರ್ಕೇರ, ಉಪಾಧ್ಯಕ್ಷ ರವೀಶ್ ಎಸ್ ಕೊರವಡಿ, ಕೋಟೇಶ್ವರ ಘಟಕದ ಅಧ್ಯಕ್ಷ ನಾಗರಾಜ್ ಬೀಜಾಡಿ, ಮಾಜಿ ಅಧ್ಯಕ್ಷರಾದ ಜಗದೀಶ್ ಮೊಗವೀರ ಮಾರ್ಕೋಡು, ಸುರೇಶ್ ಚಾತ್ರಬೆಟ್ಟು, ಬೀಜಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಸುಮತಿ ನಾಗರಾಜ್, ಊರಿನ ಹಿರಿಯರಾದ ಹೆರಿಯಣ್ಣ ಚಾತ್ರಬೆಟ್ಟು, ಶೇಖರ ಚಾತ್ರಬೆಟ್ಟು, ಬಾಬಣ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Comments are closed.