ಕುಂದಾಪುರ: ಕುಂದಾಪುರದ ಹೃದಯ ಭಾಗದಲ್ಲಿರುವ ಕುಂದಾಪುರ ಗಾಂಧಿ ಮೈದಾನ ಸುಂದರಿಕರಣಗೊಳಿಸುವ ನಿಟ್ಟಿನಲ್ಲಿ ಶಾಸಕರ ಮನವಿ ಮೇರೆಗೆ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿಯವರು ಭೇಟಿ ನೀಡಿದರು.
ಗಾಂಧಿ ಮೈದಾನ ಸುತ್ತ ಕಾಂಪೌಂಡ್ ಹಾಲ್ ಕಟ್ಟುವುದು ಹಾಗೂ ವಾಲಿಬಾಲ್ ಕಬಡ್ಡಿ ಕೋರ್ಟ್ ರಚನೆಯ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು ಜಿಲ್ಲಾಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚೆ ನಡೆಸಿದರು. ಕುಂದಾಪುರ ತಾಲೂಕು ಕೇಂದ್ರದಲ್ಲಿ ಗಾಂಧಿ ಮೈದಾನ ಮತ್ತು ನೆಹರೂ ಮೈದಾನ
ಸಮರ್ಪಕವಾಗಿ ಇರುವ ಎರಡು ಮೈದಾನಗಳಾಗಿದೆ. ಗಾಂಧಿ ಮೈದಾನ ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿದೆ. ಪುರಸಭೆ ನೆಹರು ಮೈದಾನವನ್ನು ಸ್ವಚ್ಛತೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆ ನಡೆಸಲು ಅನುವು ಮಾಡಿಕೊಡುವ ಬಗ್ಗೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಕುಂದಾಪುರದ ಪುರಸಭಾ ವ್ಯಾಪ್ತಿಯಲ್ಲಿರುವ ಖಾರ್ವಿಕೇರಿ ಹಾಗೂ ಕೋಡಿ ಸಮುದ್ರದ ತೀರದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯ ಹೊಂದಿ ಹಕ್ಕು ಪತ್ರ ಹೊಂದದೇ ಇರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಮುಂದಿನ ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಶಾಸಕರು ಚರ್ಚಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ, ಪುರಸಭೆಯ ಉಪಾಧ್ಯಕ್ಷೆ ವನಿತ ಎಸ್.ಬಿಲ್ಲವ, ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ, ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಆನಂದ್.ಜೆ, ಗುರುಪ್ರಸಾದ್, ಅಂಜನಿ ಗೌಡ, ಕಂದಾಯ ನಿರೀಕ್ಷಕ ದಿನೇಶ್, ಪಕ್ಷದ ಮುಖಂಡರಾದ ಸುರೇಶ್ ಶೆಟ್ಟಿ ಗೋಪಾಡಿ, ಸುನೀಲ್ ಶೆಟ್ಟಿ, ಪ್ರಕಾಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
Comments are closed.