ಕರಾವಳಿ

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ & ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕ ಅಬ್ದುಲ್ ಸಲಾಂ ಚಿತ್ತೂರು ಅವರಿಗೆ ‘ನಮ್ಮೂರ ಪೊನ್ನು’ ಗೌರವ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರದ ಮೂಡು ಗೋಪಾಡಿಯಲ್ಲಿರುವ ಐ.ಬಿ.ಟಿ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳು, ಶಿಕ್ಷಣ ಮತ್ತು ಸಾಮಾಜಿಕ ನಾಯಕತ್ವದಲ್ಲಿ ತೊಡಗಿಸಿಕೊಂಡಿರುವ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾದ ಅಬ್ದುಲ್ ಸಲಾಂ ಚಿತ್ತೂರು ಅವರನ್ನು ಐ.ಬಿ.ಟಿ ಗಾರ್ಡನ್ ಚೇರ್ಮನ್, ಸುನ್ನಿ ಸಂಘಟನೆಗಳ ಜೀವನಾಡಿ, ಸೈಯದ್ ಜಅಫರ್ ಅಸ್ಸಖಾಫ್ ತಂಘಲ್ ರವರು ‘ನಮ್ಮೂರ ಪೊನ್ನು’ ಬಿರುದು ನೀಡಿ ಗೌರವಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮೂಡು ಗೋಪಾಡಿ ಜುಮ್ಮಾ ಮಸೀದಿಯ ಖತೀಬರಾದ ಇಖ್ ರಮುಲ್ಲಾ ಸಖಾಫಿ, ಹಾಗೂ ಸೈಯದ್ ಶಾಮೀರ್ ಹುಸೈನ್ ಸಖಾಫಿ, ಇನ್ನಿತರ ಧಾರ್ಮಿಕ ಪಂಡಿತರು ಸಮುದಾಯದ ನಾಯಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಅಮೀರ್ ಅಹ್ಸನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.