ಕರಾವಳಿ

ಕಾಡು ಪ್ರಾಣಿ ಭೇಟೆಗೆ ಸಂಚು ಮಾಡಿ ಅರಣ್ಯ ಪ್ರವೇಶಿಸಿದ್ದ ಮೂವರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ರಾತ್ರಿ ವೇಳೆ ಕಾಡು ಪ್ರಾಣಿ ಹತ್ಯೆಗೆ ಅರಣ್ಯ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ ಘಟನೆ ವಂಡಾರು ಬಳಿ ನಡೆದಿದೆ.

ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬಂದೂಕು, 11 ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ ಮೂರು ಮೊಬೈಲ್ ಫೋನ್ ಸಹಿತ ಆರೋಪಿಗಳು ಬಳಸಿದ್ದ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್, ಪ್ರಕಾಶ್ ಪೂಜಾರಿ, ವಲಯ ಅರಣ್ಯಾಧಿಕಾರಿಗಳಾದ  ಜ್ಯೋತಿ, ಸಂದೇಶ್ ಕುಮಾರ್, ಗಣಪತಿ ವಿ ನಾಯ್ಕ್ ಹಾಗೂ ಶಂಕರನಾರಾಯಣ ವಲಯ ಸಿದ್ದಾಪುರ ವನ್ಯಜೀವಿ ವಲಯ ಆಗುಂಬೆ ವನ್ಯಜೀವಿ ವಲಯದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.