ಕರ್ನಾಟಕ

ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ ‘ನಮ್ಮ ಮೆಟ್ರೋ’ | ಪ್ರಯಾಣ ದರದಲ್ಲಿ ಭಾರಿ ಏರಿಕೆ; ನಾಳೆಯಿಂದಲೇ ಜಾರಿ

Pinterest LinkedIn Tumblr

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಕೊನೆಗೂ ಏರಿಕೆಯಾಗಿದ್ದು ಈ ಬಗ್ಗೆ ಬಿ.ಎಂ.ಆರ್.ಸಿ.ಎಲ್. ಅಧಿಕೃತ ಆದೇಶ ಪ್ರಕಟಿಸಿದೆ.

ಪ್ರಯಾಣ ದರ ಶೇ.46 ರಷ್ಟು ಏರಿಕೆ ಮಾಡಲಾಗಿದೆ. ಇನ್ಮುಂದೆ ಪ್ರಯಾಣ ದರ ಕನಿಷ್ಠ 10 ರೂ ನಿಂದ 90 ರೂಪಾಯಿ ವರೆಗೆ ಇರಲಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚೆ ಸಭೆಗಳು ನಡೆದಿತ್ತು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆಯಾಗಿದೆ. ಪರಿಷ್ಕೃತ ದರ ನಾಳೆ (ಫೆ.9 ರಿಂದ) ಯಿಂದ ಜಾರಿಗೆ ಬರಲಿದೆ.

ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ದೇಶದ ಇತರ ರಾಜ್ಯಗಳು, ಸಿಂಗಪುರದ ಮೆಟ್ರೋ ಪರಿಷ್ಕರಣೆ ಕ್ರಮವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ಮಾಡಿದೆ. 2017 ರಲ್ಲಿ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮೆಟ್ರೋ ಕಾಮಗಾರಿಗಾಗಿ ಸಾಲದ ಮೇಲಿನ ಬಡ್ಡಿ, ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ಹೇಳಿದ್ದರು.

ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿತ್ತು. ಈಗ ಅಂತಿಮವಾಗಿ ದರ ಏರಿಕೆ ಮಾಡಲಾಗಿದೆ. ವಿಶೇಷ ದಿನಗಳಲ್ಲಿ, ನಾನ್ ಪೀಕ್ ಅವರ್‌ಗಳಲ್ಲಿ, ಡಿಸ್ಕೌಂಟ್ ನೀಡಲು ಸಮಿತಿ ಶಿಫಾರಸು ಮಾಡಿದೆ.

Comments are closed.