ಮೈಸೂರು: ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಚೇತನ್ (45), ಅವರ ಪತ್ನಿ ರೂಪಾಲಿ (43), ಮತ್ತು ಅವರ ಮಗ ಕುಶಾಲ್ (15) ಮತ್ತು ಚೇತನ್ ಅವರ ತಾಯಿ ಪ್ರಿಯಂವದ (62) ಎಂದು ಗುರುತಿಸಲಾಗಿದೆ.
ಸಾಯುವುದಕ್ಕೆ ಮೊದಲು ಚೇತನ್ ಅಮೆರಿಕದಲ್ಲಿರುವ ತನ್ನ ಸಹೋದರ ಭರತ್ ಗೆ ಕರೆ ಮಾಡಿದ್ದರು, ಅವರು ಚೇತನ್ ಪತ್ನಿ ರೂಪಾಲಿಯವರ ಪೋಷಕರಿಗೆ ಕರೆ ಮಾಡಿ ಅಪಾರ್ಟ್ ಮೆಂಟ್ ಬಳಿ ಹೋಗಿ ವಿಚಾರಿಸಿ ಎಂದು ಹೇಳಿದ್ದರಂತೆ. ಪೋಷಕರು ಫ್ಲಾಟ್ ಬಳಿ ಬಂದು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚೇತನ್ ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, 2019 ರಲ್ಲಿ ಮೈಸೂರಿಗೆ ಸ್ಥಳಾಂತರಗೊಳ್ಳುವ ಮೊದಲು ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಮೈಸೂರಿಗೆ ಬಂದು ಅಪಾರ್ಟ್ ಮೆಂಟ್ ಖರೀದಿಸಿ ಕಾರ್ಮಿಕ ಗುತ್ತಿಗೆದಾರರಾಗಿದ್ದರು.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
Comments are closed.